Job Description: * ಕುಶಲಕರ್ಮಿಗಳು, ಮಹಿಳೆಯರು ಹಾಗೂ ಕುಶಲಕರ್ಮಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರಿಗೆ ಸರಿಯಾದ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ಮೂಲಕ 'ವಿಮಾನ ನಿಲ್ದಾಣವು ಪ್ರದೇಶದ ನುರಿತ ಕುಶಲಕರ್ಮಿಗಳಿಗಾಗಿ' 'Airport as Venue for Skilled Artisans of the Region' (AVSAR) ಯೋಜನೆಯನ್ನುಆರಂಭಿಸಿದೆ. * ಈ ಯೋಜನೆ ಮೂಲಕ ಬಡವರಿಗೆ ಹಣ ಸಂಪಾದಿಸಲು ಸಹಾಯ ಮಾಡಲು ಅವಕಾಶವನ್ನು ಒದಗಿಸಲಾಗುತ್ತದೆ, ಈ ಮೂಲಕ ಬಡವರು ತಮ್ಮ ಕುಟುಂಬಗಳನ್ನು ಸ್ವಾವಲಂಬನೆಯಾಗಿ ನೋಡಿಕೊಳ್ಳಬಹುದಾಗಿದೆ ಎಂದಿದ್ದಾರೆ. * ಈ ಯೋಜನೆ ಅಡಿಯಲ್ಲಿ ತಮ್ಮ ನಿರ್ದಿಷ್ಟ ಪ್ರದೇಶದ ಸ್ವಯಂ ನಿರ್ಮಿತ ಉತ್ಪನ್ನಗಳನ್ನು ಪ್ರದರ್ಶಿಸುವ ಅಥವಾ ಮಾರಾಟ ಮಾಡುವ ಉದ್ದೇಶಕ್ಕಾಗಿ ವಿಮಾನ ನಿಲ್ದಾಣಗಳಲ್ಲಿ ಸ್ವ ಸಹಾಯ ಗುಂಪುಗಳಿಗೆ (SHGs) ಜಾಗವನ್ನು ಒದಗಿಸಲಾಗುತ್ತದೆ. ಎಲ್ಲ AAI-ಕಾರ್ಯನಿರ್ವಹಿಸುವ ವಿಮಾನ ನಿಲ್ದಾಣದಲ್ಲಿ, 100-200 ಚದರ ಅಡಿ ಪ್ರದೇಶವನ್ನು SHGಗಳಿಗೆ( ಸಹಾಯ ಗುಂಪುಗಳಿಗೆ) ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. * ಟರ್ನ್-ಆನ್-ಟರ್ನ್ ಆಧಾರದ ಮೇಲೆ, ಈ ಪ್ರದೇಶವನ್ನು 15 ದಿನಗಳ ಕಾಲಾವಧಿಗೆ ಸ್ವಸಹಾಯ ಗುಂಪುಗಳಿಗೆ ನೀಡಲಾಗುತ್ತದೆ. ಪ್ರಸ್ತುತ ನಿಯೀಜಿಸಲಾಗಿರುವ AAI'ಗಳು ಚೆನ್ನೈ, ಕುಶಿನಗರ, ಡೆಹ್ರಾಡೂನ್, ಅಮೃತಸರ ಹಾಗೂ ಉದಯಪುರದ AAI-ಚಾಲಿತ ವಿಮಾನ ನಿಲ್ದಾಣಗಳಲ್ಲಿ ಕೆಲವು ಔಟ್‌ಲೆಟ್‌ಗಳನ್ನು ನಿಯೋಜಿಸಲಾಗಿದೆ, ಈ ಎಲ್ಲ ಪ್ರದೇಶಗಳಲ್ಲಿ ಸ್ಥಳೀಯವಾಗಿ ಮಹಿಳೆಯರು ಮನೆಯಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಈ ಉಪಕ್ರಮವು SHGಗಳಿಗೆ(ಸ್ವ ಸಹಾಯ) ಗೋಚರತೆಯನ್ನು ಕಲ್ಪಿಸವ ಮೂಲಕ ಅವುಗಳನ್ನು ಬಲಪಡಿಸುತ್ತದೆ, ಹಾಗೂ ಉತ್ಪನ್ನಗಳನ್ನು ವ್ಯಾಪಕ ಶ್ರೇಣಿಯ ಮಾರುಕಟ್ಟೆಗೆ ಪ್ರಚಾರ ಮಾಡಲು ಅವರನ್ನು ಸಿದ್ಧಪಡಿಸಲಾಗುತ್ತದೆ ಎಂದಿದ್ದಾರೆ. * ಈ ಎಲ್ಲ AAI ಗಳಲ್ಲಿ ಪ್ಯಾಕೇಜ್ಡ್ ಪಾಪಡ್, ಪಫ್ಡ್ ರೈಸ್, ಬಿದಿರು ಆಧಾರಿತ ಲೇಡೀಸ್ ಬ್ಯಾಗ್, ಬಾಟಲ್, ಉಪ್ಪಿನಕಾಯಿ, ಸಾಂಪ್ರದಾಯಿಕ ಕರಕುಶಲ, ಸ್ಥಳೀಯ ಕಲಾಕೃತಿಗಳು, ಕಸೂತಿ, ನೈಸರ್ಗಿಕ ಬಣ್ಣಗಳು ಹಾಗೆಯೇ ಇನ್ನಿತರ ದೇಶಿಯ ವಸ್ತುಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಗುತ್ತಿದೆ.