Job Description: * ಯುದ್ಧಪೀಡಿತ ದೇಶ ಉಕ್ರೇನ್‌ ರಾಜಧಾನಿ ಕೀವ್‌ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭೇಟಿ ನೀಡಿ ಆ ದೇಶಕ್ಕೆ ಸೇನಾ ನೆರವಿನ ಭರವಸೆಯನ್ನು ನೀಡಲು ಸಿದ್ದ ಎಂದಿದೆ. ಹಾಗೆಯೇ ರಷ್ಯಾ ಹಾಗೂ ಉಕ್ರೇನ್‌ನ ಯುದ್ಧಕೈದಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆಯೂ ಆರಂಭವಾಗಿದೆ. * ಇದೀಗ ಬ್ರಿಟನ್ ಸರ್ಕಾರವು ಉಕ್ರೇನ್ ದೇಶದ ಪರವಾಗಿ ದೃಢವಾಗಿ ನಿಲ್ಲಲಿದೆ ಎಂದಿದ್ದಾರೆ. ಪ್ರಧಾನಿ ಜಾನ್ಸನ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಜೊತೆ ದೇಶದ ಸೇನೆ ಹಾಗೂ ಆರ್ಥಿಕ ನೆರವುಗಳ ಬಗ್ಗೆ ಮಾತುಕತೆ ನಡೆಸಿದರು. ಹಾಗೆಯೇ ರಷ್ಯಾ ದೇಶದ ವಿರುದ್ಧದ ಹೋರಾಟಕ್ಕಾಗಿ ಉಕ್ರೇನ್‌ಗೆ 120 ಸಶಸ್ತ್ರ ವಾಹನಗಳು, ಹಡಗು ಪ್ರತಿರೋಧಕ ಕ್ಷಿಪಣಿ ವ್ಯವಸ್ಥೆ ಹಾಗೂ ಹಣಕಾಸು ನೆರವುಗಳನ್ನು ಘೋಷಣೆ ಮಾಡಿದ್ದಾರೆ. * ವಿಶ್ವ ಬ್ಯಾಂಕ್‌ನಿಂದ ಉಕ್ರೇನ್ ರಾಷ್ಟ್ರವು ಹೆಚ್ಚುವರಿಯಾಗಿ 3,750 ಕೋಟಿ ರೂ. ಸಾಲದ ಖಾತ್ರಿಯನ್ನು ಪಡೆದುಕೊಂಡಿದೆ. ಇದೀಗ ಬ್ರಿಟನ್ ರಾಷ್ಟ್ರವು ಉಕ್ರೇನ್'ಗೆ ಒಟ್ಟಾರೆಯಾಗಿ 7,500 ಕೋಟಿ ರೂ. ಸಾಲದ ಖಾತ್ರಿಯನ್ನು ಖಚಿತಪಡಿಸಿದೆ. * ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರ ನಾಯಕತ್ವವು ಆ ದೇಶದ ಜನತೆಯ ಧೈರ್ಯ ಹಾಗೂ ಅನೇಕ ಸಾಹಸಗಳ ಪರಿಣಾಮದಿಂದ ರಷ್ಯಾದ ದಾಳಿಯನ್ನು ಹಿಮ್ಮೆಟಿಸಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಅಂಭಿನಂದಿಸಿದ್ದಾರೆ. * ಕೀವ್ ಉಕ್ರೇನ್‌ನ ರಾಜಧಾನಿ ಹಾಗೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ. ಈ ನಗರವು ಅಲ್ಲಿನ ಡ್ನೀಪರ್ ನದಿಯ ಉದ್ದಕ್ಕೂ ಉತ್ತರ-ಮಧ್ಯ ಉಕ್ರೇನ್‌ನಲ್ಲಿದೆ. ಕೀವ್ ಯುರೋಪ್‌ನಲ್ಲಿ 7 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ. * ಕೀವ್ ಪೂರ್ವ ಯುರೋಪಿನ ಪ್ರಮುಖ ಕೈಗಾರಿಕಾ, ವೈಜ್ಞಾನಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ. ಈ ನಗರವು ಅನೇಕ ಹೈಟೆಕ್ ಕೈಗಾರಿಕೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಅಲ್ಲಿನ ಐತಿಹಾಸಿಕ ಹೆಗ್ಗುರುತುಗಳಿಗೆ ನೆಲೆಯಾಗಿದೆ.