Job Description: * ಇದೀಗ ಕೇಂದ್ರ ಆರೋಗ್ಯ ಮಂತ್ರಾಲಯದ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗ 2022 ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿರುವ ಸ್ಯಾಂಪಲ್‌ ರಿಜಿಸ್ಟ್ರೇಷನ್‌ ಸಿಸ್ಟಮ್'ನ ಕಡಿಮೆ ತಾಯಿ ಮರಣ ಪ್ರಮಾಣ ಪತ್ರದ ಪ್ರಕಾರ ರಾಜ್ಯಾವಾರು ಪಟ್ಟಿಯಲ್ಲಿ ಕರ್ನಾಟಕ ರಾಜ್ಯವು 8ನೇ ಸ್ಥಾನದಲ್ಲಿದೆ. * ಒಂದು ಲಕ್ಷಕ್ಕಿಂತ ಅಧಿಕ ಹೆರಿಗೆ ಪ್ರಕರಣಗಳು ನಡೆಯುವ ರಾಜ್ಯಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಹಿನ್ನಲೆಯಿಂದಾಗಿ 19 ರಾಜ್ಯಗಳಿಗೆ ಸಂಬಂಧಿಸಿರುವಂತೆ ಮಾತ್ರ ಸಮೀಕ್ಷೆ ಕೈಗೊಂಡು ವರದಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮೊದಲು ಕರ್ನಾಟಕದಲ್ಲಿ ಜನಿಸುವ 1,000 ಮಕ್ಕಳಲ್ಲಿ 2015-2017 ರಲ್ಲಿ 97, 2016-18 ರಲ್ಲಿ 92, 2017-19 ರಲ್ಲಿ 83 ತಾಯಂದಿರು ಮೃತ ಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ನೋಡೊದರೆ ರಾಜ್ಯದಲ್ಲಿ ಈ ವರ್ಷ ಶೇ. 9.78 ಕ್ಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. * ಕೇರಳ ರಾಜ್ಯದಲ್ಲಿ 30, ಮಹಾರಾಷ್ಟ್ರ 38, ತೆಲಂಗಾಣ 56, ಆಂಧ್ರ ಪ್ರದೇಶ 58, ಜಾರ್ಖಾಂಡ್‌ 61, ಗುಜರಾತ್‌ನಲ್ಲಿ 70 ಮಂದಿ ಮಹಿಳೆಯರು ಪ್ರಸವದ ಹಾಗೂ ಗರ್ಭಾವಸ್ಥೆ ಸಂದರ್ಭದಲ್ಲಿ ಸಾವನ್ನಪಿದ್ದಾರೆ. * ಗರ್ಭಾವಸ್ಥೆಯಲ್ಲಿ ಮಹಿಳೆಯು ಮೃತಪಟ್ಟರೆ ಅಥವಾ ಹೆರಿಗೆಯ 42 ದಿನಗಳ ಬಳಿಕ ಮಹಿಳೆ ಮೃತಪಟ್ಟರೆ ತಾಯಿ ಮರಣ ಎನ್ನಲಾಗುತ್ತದೆ. ಇದೀಗ ರಾಜ್ಯದಲ್ಲಿ ಗರ್ಭಿಣಿಯರ ಆರೋಗ್ಯಕ್ಕಾಗಿ ಆರೋಗ್ಯ ಇಲಾಖೆಯು ಕೈಗೊಳ್ಳುತ್ತಿರುವ ಕಾರ್ಯಕ್ರಮಗಳಿಂದ ಹೆರಿಗೆ ಸಂದರ್ಭ ತಾಯಿಯ ಮರಣದ ಅನುಪಾತ ವೆಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ ಎಂದು ವರದಿಯಾಗಿದೆ. * ತಾಯಿ ಮರಣ ಕಾರಣಗಳು: ಅನಪೇಕ್ಷಿತ ಗರ್ಭಪಾತ ಹೊಂದಿರುವ ಮಹಿಳೆಯರಲ್ಲಿ ಅಸುರಕ್ಷಿತ ಗರ್ಭಪಾತ, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಾವಿನ ಪ್ರಮುಖ ಕಾರಣವಾಗಿದೆ. ಪರೋಕ್ಷವಾಗಿ HIV ಹಾಗೂ ಹೃದಯ ಖಾಯಿಲೆ, ಮಧುಮೇಹ ಹಾಗೂ ರಕ್ತಹೀನತೆ ಇನ್ನು ಅನೇಕ ಕಾರಣಗಳಿಂದ ತಾಯಿ ಮರಣ ಹೊಂದುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.