Job Description: * ಪ್ರಸ್ತುತ ಕರ್ನಾಟಕ ಹಾಲು ಮಹಾಮಂಡಳಿ (KMF)ಗೆ ದೇಶದಲ್ಲಿಯೇ ಅತ್ಯುತ್ತಮ ವ್ಯಾಪಾರ ಮಾರುಕಟ್ಟೆ ವಿಸ್ತರಣಾ ಜಾಲಕ್ಕೆ ನೀಡಲಾಗುವ ಪ್ರಶಸ್ತಿಯನ್ನು ನೀಡಲಾಗಿದೆ. * KMF ಗೆ ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾ ಮಂಡಲದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಿಂದಾಗಿ ಹಾಲು, ಹಾಲಿನ ಉತ್ಪಾದನೆಗಳ ಕ್ಷೇತ್ರದಲ್ಲಿ ಸಲ್ಲಿಸಿರುವ ಉತ್ತಮ ಸೇವೆಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. * ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾ ಮಂಡಲವು ಕಳೆದ '05' ವರ್ಷಗಳಲ್ಲಿ ಸರಿ ಸುಮಾರು 5 ಸಾವಿರ ಕೋಟಿಗೂ ಹೆಚ್ಚಿನ ವ್ಯವಹಾರಗಳನ್ನು ನಡೆಸಿದೆ. ಹಾಗು ಇದರ ಜೊತೆಗೆ KMF ಕೂಡ ಸುಮಾರು 2,400 ಕೋಟಿ ರೂ. ವ್ಯಾಪಾರ ವಹಿವಾಟು ನಡೆಸಿದೆ. ಈ ಹಿನ್ನಲೆಯಿಂದಾಗಿ KMF ನ ನಂದಿನಿ ಬ್ರಾಂಡ್‌ NCDFI ಗೆ ಪ್ರಶಸ್ತಿಗೆ ಭಾಜನರಾಗಿದೆ. * ಇತ್ತೀಚಿಗೆ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಅವರು ಗುಜರಾತ್‌ ರಾಜ್ಯದ ಗಾಂಧಿನಗರದಲ್ಲಿ ನಡೆದ NCDFI ಗೆ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. * ಪ್ರಸ್ತುತ ದೇಶದಲ್ಲಿ ಅಮೂಲ್ ಮೊದಲ ಸ್ಥಾನದಲ್ಲಿದೆ KMF 2 ನೇ ಸ್ಥಾನ ಅಲಂಕರಿಸಿದೆ. ಕರ್ನಾಟಕ ರಾಜ್ಯ ಹಾಗೂ 'ನಂದಿನಿ' ಬ್ರಾಂಡ್ ಹೆಸರಿನಲ್ಲಿ ಹಾಲು ಹಾಗೂ ಹಾಲಿನ ಉತ್ಪಾದನೆಗಳನ್ನು ರೈತ ಸಮುದಾಯಕ್ಕೆ ನೀಡಲಾಗುತ್ತಿದೆ. * ಕರ್ನಾಟಕ ಹಾಲು ಒಕ್ಕೂಟ (KMF) ಭಾರತದ ಕರ್ನಾಟಕದಿಂದ ಡೈರಿ ಸಹಕಾರಿಯಾಗಿದೆ, ಇದು ನಂದಿನಿ ಬ್ರಾಂಡ್ ಹೆಸರಿನಲ್ಲಿ ಹಾಲು, ಮೊಸರು, ತುಪ್ಪ, ಬೆಣ್ಣೆ, ಐಸ್ ಕ್ರೀಮ್ ಹಾಗೂ ಸಿಹಿತಿಂಡಿಗಳಂತಹ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಕರ್ನಾಟಕ ಸರ್ಕಾರದ ಸಹಕಾರ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಹಾಲು ಉತ್ಪಾದಕರ ಒಕ್ಕೂಟವಾಗಿದೆ. * ಪ್ರಸ್ತುತ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಹಾಲು ಉತ್ಪಾದಕ ಸಹಕಾರಿ ಸಂಘಗಳಿವೆ. ಈ ಸಂಘವು ಅಮುಲ್ ನಂತರ ಭಾರತದಲ್ಲಿ 2 ನೇ ಅತಿ ದೊಡ್ಡ ಹಾಲು ಸಹಕಾರಿ ಸಂಸ್ಥೆಯಾಗಿದೆ.