Job Description: * ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಮಾರ್ಚ್. 27 ರಂದು ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ ಆಯೋಜಿಸಿರುವ ಚಿತ್ರಸಂತೆ - 2022 ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ಬಾರಿ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವದ ಭಾಗವಾಗಿ ಈ ಚಿತ್ರಸಂತೆಯನ್ನು ಸ್ವಾತಂತ್ರ್ಯ ಯೋಧರಿಗೆ ಅರ್ಪಿಸಲಾಗಿದೆ. * ರಾಜ್ಯದಲ್ಲಿನ ಈ ಚಿತ್ರಸಂತೆಯಲ್ಲಿ ದೇಶ್‌ಬಂಧು ಗುಪ್ತ, ರಣ್‌ಬೀರ್‌ ಸಿಂಗ್‌, ಪೀರ್‌ ಅಲಿಖಾನ್‌, ಇವರೊಡನೆ ಇನ್ನಿತರ 200 ಜನರ ಸ್ವಾತಂತ್ರ್ಯ ಹೋರಾಟಗಾರರ ಚಿತ್ರವನ್ನು ಚಿತ್ರಸಂತೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ ಎಂದಿದ್ದಾರೆ. * ಪ್ರಸ್ತುತ ದೇಶದ 16 ರಾಜ್ಯಗಳಿಂದ 1000ಕ್ಕೂ ಅಧಿಕ ಅಂಗಡಿಗಳನ್ನು ತೆರೆಯಲಾಗಿದೆ. ಪ್ರಸ್ತುತ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ಈ 'ಕಲಾ ಪ್ರದರ್ಶನ' ಉದ್ಘಾಟನೆ ಮಾಡಿದ್ದಾರೆ. * ಈ ಚಿತ್ರಸಂತೆಯು ಕಳೆದ ಬಾರಿ ಆನ್‌ಲೈನ್‌ ಮೂಲಕ ಜರುಗಿತ್ತು. ಕಾರಣ ಕೋವಿಡ್-19 ರೋಗದ ಹಿನ್ನೆಲೆಯಿಂದಾಗಿ ಕಳೆದ ವರ್ಷದ 18ನೇ ಚಿತ್ರಸಂತೆಯನ್ನು ಆನ್‌ಲೈನ್‌ ಮೂಲಕ ನಡೆಸಲಾಗಿತ್ತು.