Job Description: * ಪ್ರಸ್ತುತ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ (KIA) ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ 2022 ರ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಸ್ಮಾರ್ಟ್ ಆವಿಷ್ಕಾರ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಏವಿಯೇಷನ್ ಇನ್ನೋವೇಷನ್ ಸಂಸ್ಥೆ ವತಿಯಿಂದ KIA'ಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. * ಇತ್ತೀಚಿಗೆ ಈ ಪ್ರಶಸ್ತಿಯನ್ನು ಜೋತಿರಾದಿತ್ಯ ಸಿಂದಿಯಾ ಅವರು ಹೈದರಾಬಾದ್ನ ತಾಜ್ ಹೋಟೆಲ್ನಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಧಾನ ಮಾಡಿದ್ದಾರೆ. * ಪ್ರಸ್ತುತ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಪ್ರಶಂಸೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಈ ಪ್ರಶಸ್ತಿಯು ಸ್ಮಾರ್ಟ್ ಆವಿಷ್ಕಾರ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಗಳಿಗಾಗಿ ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2022ರಲ್ಲಿ '2' ಪ್ರಮುಖ ಪುರಸ್ಕಾರಗಳನ್ನು ಪಡೆದುಕೊಂಡಿದೆ. * ಇದೀಗ ಬೆಂಗಳೂರು ವಿಮಾನ ನಿಲ್ದಾಣವು ಸಾಮಾನ್ಯ ವಿಭಾಗದಲ್ಲಿ ಶ್ರೇಷ್ಠ ವಿಮಾನ ನಿಲ್ದಾಣ ಎಂಬ ಪುರಸ್ಕಾರವನ್ನು ಪಡೆದುಕೊಂಡಿದೆ, ಹಾಗೂ 'ಏವಿಯೇಷನ್ ಇನ್ನೊವೇಷನ್ ಪುರಸ್ಕಾರವನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯನ್ನು ನೀಡುವ ಮೊದಲು ಗ್ರಾಹಕ ಸೇವೆ, ಸೌಲಭ್ಯಗಳು ಹಾಗೂ ಆವಿಷ್ಕಾರಗಳ ಮೌಲ್ಯಮಾಪನಗಳನ್ನೂ ಪರಿಶೀಲಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. * ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕ್ಲೀನ್ಮ್ಯಾಕ್ಸ್ ಸೋಲಾರ್ ಅಭಿವೃದ್ಧಿಪಡಿಸಿರುವ ಕರ್ನಾಟಕದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣವಾಗಿದೆ. ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 'ದಕ್ಷಿಣ ಹಾಗೂ ಮಧ್ಯ ಭಾರತದ ಹೆಬ್ಬಾಗಿಲಾಗಿದೆ'.