Job Description: * ಇತ್ತೀಚಿಗೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರು ರಿಲಯನ್ಸ್ ಪವರ್ ಹಾಗೂ ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್(Infrastructure) ಸಂಸ್ಥೆಗಳ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. * ಸೆಬಿ (SEBI) ಇತ್ತೀಚಿಗೆ ಅನಿಲ್ ಅಂಬಾನಿ ಅವರಿಗೆ ಯಾವುದೇ ಲಿಸ್ಟೆಡ್ ಕಂಪೆನಿ ಜೊತೆಗೆ ನಂಟು ಹೊಂದುವುದಕ್ಕೆ ನಿರ್ಬಂಧವನ್ನು ಹೇರಿದೆ, ಈ ಹಿನ್ನೆಲೆಯಿಂದಾಗಿ ಅನಿಲ್ ಅಂಬಾನಿ ಅವರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. * ಸೆಬಿ ಮಾಡಿರುವ ವರದಿಯ ಪ್ರಕಾರ ಅನಿಲ್ ಅಂಬಾನಿ ಯವರು ಕಂಪೆನಿಯಿಂದ ಅಕ್ರಮವಾಗಿ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪದ ಅಡಿ ಸೆಕ್ಯುರಿಟೀಸ್ ಮಾರ್ಕೆಟ್‍ನಿಂದ ಹೊರಗಿಟ್ಟಿದೆ. * ಇದೀಗ ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ಅನಿಲ್ ಅಂಬಾನಿ ಅವರ ಸ್ಥಾನಕ್ಕೆ ಹೆಚ್ಚುವರಿ ನಿರ್ದೇಶಕರಾಗಿ ರಾಹುಲ್ ಸರೀನ್ ಅವರನ್ನು ಮುಂದಿನ '5' ವರ್ಷಗಳ ಅವಧಿಗೆ ನೇಮಕ ಮಾಡಿದೆ. ರಾಹುಲ್ ಸರೀನ್ ಅವರು ಈ ಮೊದಲು ಭಾರತ ಸರಕಾರದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿದ್ದಾರೆ. * ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಭಾರತದಲ್ಲಿ ಭದ್ರತೆಗಳು ಹಾಗೂ ಸರಕು ಮಾರುಕಟ್ಟೆಯ ನಿಯಂತ್ರಣ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಈ ಹಿಂದೆ 1988 ರ ಏಪ್ರಿಲ್. 12 ರಂದು ಸ್ಥಾಪಿಸಲಾಗಿದೆ. ಹಾಗೂ ಈ ಸಂಸ್ಥೆಗೆ 1992 ರ ಜನವರಿ. 30 ರಂದು SEBI ಕಾಯಿದೆ, 1992 ಮೂಲಕ ಶಾಸನಬದ್ಧ ಅಧಿಕಾರಗಳನ್ನು ಒದಗಿಸಲಾಗಿದೆ ಎಂದು ತಿಳಿಸಲಾಗಿದೆ. * ಸೆಬಿ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ವ್ಯಾಪಾರ ಜಿಲ್ಲೆಯಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಹಾಗೂ ಕ್ರಮವಾಗಿ ನವದೆಹಲಿ, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್‌ ನಗರಗಳಲ್ಲಿ ಕಚೇರಿಯನ್ನು ಹೊಂದಿದೆ. ಇವುಗಳ ಜೊತೆಗೆ ಜೈಪುರ ಹಾಗೂ ಬೆಂಗಳೂರಿನಲ್ಲಿ ಸ್ಥಳೀಯ ಕಚೇರಿಗಳನ್ನು ತೆರೆದಿದೆ.