Job Description: * ಪ್ರಸ್ತುತ ಕೆಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇನ್ನು ಮುಂದೆ ಪ್ರತಿವರ್ಷವು ಭಾರತೀಯ ವಿಮಾನಯಾನ ಸಂಸ್ಥೆಗೆ 110 ರಿಂದ 120 ವಿಮಾನಗಳು ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. * ವಿಂಗ್‌ ಇಂಡಿಯಾ 2022 ರ ವಿಮಾನದ ಪ್ರದರ್ಶನ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. * ಮುಂಬರುವ ವರ್ಷದಲ್ಲಿ ದೇಶೀಯ ಪ್ರಯಾಣಿಕರ ಸಂಖ್ಯೆಯು 4.10 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. ಈ ಹಿನ್ನಲೆಯಿಂದಾಗಿ 2024-25 ರ ವೇಳೆಗೆ ವಿಮಾನಯಾನ ಕ್ಷೇತ್ರವು ಇನ್ನು ಅಧಿಕವಾಗಿ ವಿಸ್ತಾರಗೊಳ್ಳಲಿದೆ ಎಂದು ಸಿಂಧಿಯಾ ಅವರು ತಿಳಿಸಿದ್ದಾರೆ. * ಇಂಡಿಯನ್ ಏರ್‌ಲೈನ್ಸ್ ಏರ್ ಇಂಡಿಯಾ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಈ ಸಂಸ್ಥೆಯು ದೆಹಲಿಯಲ್ಲಿ ನೆಲೆಗೊಂಡಿದೆ ಪ್ರಸ್ತುತ ಈ ಸಂಸ್ಥೆಯು '08' ಸ್ವಾತಂತ್ರ್ಯಪೂರ್ವ ದೇಶೀಯ ವಿಮಾನಯಾನ ಸಂಸ್ಥೆಗಳ ವಿಲೀನದ ನಂತರ ಏರ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. * ಈ ಹಿಂದೆ 2005 ರ ಡಿಸೆಂಬರ್. 10 ರಂದು ಏರ್‌ಲೈನ್ ನ್ನು ಭಾರತೀಯ ಎಂದು ಮರುನಾಮಕರಣ ಮಾಡಲಾಯಿತು. ಅಲಯನ್ಸ್ ಏರ್ ಭಾರತೀಯರ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ನಂತರ 2007 ರಲ್ಲಿ ಭಾರತ ಸರ್ಕಾರವು ಇಂಡಿಯನ್ ಏರ್‌ಲೈನ್ಸ್ ಅನ್ನು ಏರ್ ಇಂಡಿಯಾ ಲಿಮಿಟೆಡ್‌ಗೆ ಅದರ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿ ವಿಲೀನಗೊಳಿಸುವುದಾಗಿ ಘೋಷಣೆ ಮಾಡಿ ನ್ಯಾಷನಲ್ ಏವಿಯೇಷನ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (ಈಗ ಏರ್ ಇಂಡಿಯಾ ಲಿಮಿಟೆಡ್ ಎಂದು ಕರೆಯಲಾಗುತ್ತದೆ) ಎಂಬ ಕಂಪನಿಯನ್ನು ಸ್ಥಾಪನೆ ಮಾಡಿತು.