Job Description: * ಪ್ರಸ್ತುತ ಪಂಜಾಬ್ ರಾಜ್ಯದ ಮಾಜಿ ಶಾಸಕರು ಇನ್ನುಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲಿದ್ದಾರೆ ಹಾಗೂ ಅವರು ಸೇವೆ ಸಲ್ಲಿಸಿರುವ ಪ್ರತಿ ಅವಧಿಗೆ ಪಿಂಚಣಿ ಪಡೆಯುವ ಅಭ್ಯಾಸವನ್ನು ಇಂದಿನದಿಂದ ತೆಗೆದುಹಾಕಲಾಗುವುದು ಎಂದು ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹೇಳಿಕೆ ನೀಡಿದ್ದಾರೆ. * ಪಂಜಾಬ್‌ ರಾಜ್ಯದ ಮಾಜಿ ಶಾಸಕರು, ಎರಡು ಬಾರಿ, ಐದು ಬಾರಿ ಅಥವಾ ಹತ್ತು ಬಾರಿ ಜಯಗಳಿಸಿದರು ಇನ್ನುಮುಂದೆ ಕೇವಲ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯುಲಿದ್ದಾರೆ ಎಂದು ಮುಖ್ಯಮಂತ್ರಿ ಮಾನ್ ಅವರು ಹೇಳಿದ್ದಾರೆ. * ಇದೀಗ ಪಂಜಾಬ್ ರಾಜ್ಯದ ಐದು AAP ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆಯಾಗುವದರಿಂದ ಉಳಿತಾಯವಾಗುವ ಹಣವನ್ನು ಜನರ ಕಲ್ಯಾಣಕ್ಕೆ ಬಳಕೆ ಮಾಡಲಾಗುತ್ತದೆ ಎಂದು ನೂತನ ಮುಖ್ಯಮಂತ್ರಿ ಮಾನ್ ಅವರು ತಿಳಿಸಿದ್ದಾರೆ. * ರಾಜ್ಯ ಚುನಾವಣೆಯಲ್ಲಿ ಸೋತರೋ ಇನ್ನು ಹಲವು ಶಾಸಕರು 3.50 ಲಕ್ಷ, ಇನ್ನು ಕೆಲವರು 4.50 ಲಕ್ಷ, 5.25 ಲಕ್ಷ ರೂ. ಪಿಂಚಣಿಯಾಗಿ ಪಡೆಯುತ್ತಾರೆ ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಮಾನ್ ತಿಳಿಸಿದ್ದಾರೆ. * ಈ ಮೊದಲು ಕೇವಲ ಒಂದು ಅವಧಿಗೆ ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದರು ಅವರಿಗೆ ಜೀವನಪರ್ಯಂತ ಪಿಂಚಣಿ ಹಣ ನೀಡಲಾಗುತ್ತದೆ. ಈ ಪದ್ದತಿಯು ಎಲ್ಲ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಇದೀಗ ಪಂಜಾಬ್ ರಾಜ್ಯದಲ್ಲಿ ಈ ಪದ್ದತಿಗೆ ಭಗವಂತ್ ಮಾನ್ ಸರ್ಕಾರವು ಕಡಿವಾಣ ಹಾಕಲು ಸಿದ್ಧವಾಗಿದೆ. ಇನ್ನುಮುಂದೆ ಶಾಸಕರು ಎಷ್ಟು ಬಾರಿ ಗೆದ್ದರೂ ಕೂಡ ಕೇವಲ ಒಂದೇ ಅವಧಿಗೆ ಪಿಂಚಣಿ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಮುಖ್ಯಮಂತ್ರಿ ಅವರು ಹೇಳಿಕೆ ನೀಡಿದ್ದಾರೆ.