Job Description: * ಲೂಪಿಂಗ್ ಅನಿಮೇಟೆಡ್ ಜಿಐಎಫ್ ಇಮೇಜ್‌(GIF Image) ಪ್ರಮುಖ ಸೃಷ್ಟಿಕರ್ತರಾಗಿರುವ ಸ್ಟೀಫನ್ ವಿಲ್ಹೈಟ್ ಅವರು ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. * ಸ್ಟೀಫನ್ ವಿಲ್ಹೈಟ್ GIF ಅಥವಾ ಗ್ರಾಫಿಕ್ಸ್ ಇಂಟರ್ಚೇಂಜ್ ಫಾರ್ಮ್ಯಾಟ್‌ನ ಪ್ರಮುಖ ಆವಿಷ್ಕಾರಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಈ ಹಿಂದೆ 1980 ರ ದಶಕದಲ್ಲಿ ಕಾಂಪುಸರ್ವ್ ನಲ್ಲಿ ಕೆಲಸ ಮಾಡುವ ಸಂಧರ್ಭದಲ್ಲಿ ಇವರು GIF ರಚಿಸಿದ್ದರು. ಇನ್ನು ಹಲವರು ರೀತಿಯ ಪ್ರಯಾಣ, ಕ್ಯಾಂಪಿಂಗ್ ಹಾಗೂ ಮಾದರಿ ರೈಲುಗಳನ್ನು ನಿರ್ಮಾಣ ಮಾಡುವದರಲ್ಲಿ ತಮ್ಮ ಸಮಯವನ್ನ ಬಳಸಿಕೊಂಡರು. * ಸ್ಟೀಫನ್ ಅರ್ಲ್ ವಿಲ್ಹೈಟ್ ಅವರು ಕಂಪ್ಯೂಸರ್ವ್‌ನಲ್ಲಿ ಕಾರ್ಯ ನಿರ್ವಹಿಸಿದ ಅಮೇರಿಕನ್ ಕಂಪ್ಯೂಟರ್ ವಿಜ್ಞಾನಿ ಹಾಗೂ ಹಿಂದಿನ ಯುನಿಸಿಸ್-ಮಾಲೀಕತ್ವದ LZW ಅಲ್ಗಾರಿದಮ್‌ನಿಂದ GIF ಇಮೇಜ್ ಫೈಲ್ ಫಾರ್ಮ್ಯಾಟ್ ನ್ನು ಅಳವಡಿಸಿದ ತಂಡದಲ್ಲಿ ಎಂಜಿನಿಯರಿಂಗ್ ಲೀಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ GIF ನ ಸಂಶೋಧಕ ಎಂದು ಕರೆಯುವ ಇವರು ಈ ಹಿಂದೆ 2013 ರಲ್ಲಿ ವೆಬ್ಬಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.