Job Description: * ವಿಮಾನಗಳ ವಿನ್ಯಾಸ ಹಾಗೂ ಉತ್ಪಾದನೆ ಮತ್ತು ಹೆಲಿಕಾಪ್ಟರ್‌ಗಳ ಎಂಜಿನ್‌ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದಿರುವ ಕೆನಡಾದ 'ಪ್ರಾಟ್ ಅಂಡ್‌ ವಿಟ್ನಿ' ಸಂಸ್ಥೆಯು ತನ್ನ ಒಂದು ಕೇಂದ್ರವನ್ನು ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲಿದೆ. * ಇದೀಗ ಈ ಸಂಸ್ಥೆಯು ಉದ್ದೇಶಿತ ಕೇಂದ್ರಕ್ಕೆ ಸರಿ ಸುಮಾರು 160 ಜನರ ವೈಮಾಂತರಿಕ್ಷ ವಿಶ್ಲೇಷಕರು ಹಾಗೂ ಡಾಟಾ ವಿಜ್ಞಾನಿಗಳ ನೇಮಕಕ್ಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಮುಂಬರುವ ಏಪ್ರಿಲ್‌ ತಿಂಗಳಿನ ವೇಳೆಗೆ ಬೆಂಗಳೂರಿನ ಯಲಹಂಕದಲ್ಲಿರುವ ಕಾಲಿನ್ಸ್ ಏರೋಸ್ಪೇಸ್‌ ನ ಪ್ರದೇಶದಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಲಿದೆ. * ಪ್ರಾಟ್‌ ಅಂಡ್ ವಿಟ್ನಿ ಸಂಸ್ಥೆಯ ಉಪಾಧ್ಯಕ್ಷ ಜಿಮ್‌ ಹಮಕಿಯೊಟಿಸ್‌ ಅವರು ಹೇಳಿರುವ ಪ್ರಕಾರ ಈ ಕೇಂದ್ರದಲ್ಲಿ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ 'ವಿಂಗ್ಸ್ ಇಂಡಿಯಾ 2022' ಸಂದರ್ಭದಲ್ಲಿ ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ಭಾರತದ ಬೆಂಗಳೂರಿನಲ್ಲಿನ ಈ ಕೇಂದ್ರವು ಪ್ರಮುಖ ಪಾತ್ರ ವಹಿಸಲಿದೆ ಎಂದಿದ್ದಾರೆ. * ಬೆಂಗಳೂರಿನ ಈ ಕೇಂದ್ರವು ವಹಿವಾಟು ನಿರ್ವಹಣೆ, ಖರೀದಿ, ಡಿಜಿಟಲ್ ವಿಶ್ಲೇಷಣೆ ವಿಭಾಗಗಳತ್ತ ಹೆಚ್ಚಿನ ಒತ್ತು ನೀಡಲಿದೆ. ಸಂಸ್ಥೆಯ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವು ಈಗಾಗಲೇ ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ.