Job Description: * ಪ್ರಸ್ತುತ ಕೇಂದ್ರ ಸರ್ಕಾರದ ಆನ್‌ಲೈನ್ ಖರೀದಿ ವೇದಿಕೆಯಾಗಿರುವ 'ಇ-ಮಾರ್ಕೆಟ್‌ಪ್ಲೇಸ್‌' ಕೇವಲ ಒಂದೇ ವರ್ಷದಲ್ಲಿ ಸರಿ ಸುಮಾರು 1 ಲಕ್ಷ ಕೋಟಿ ರೂ. ಮೊತ್ತದ ಪರಿಕರ ಖರೀದಿಯ ಸಾಧನೆ ಮಾಡಿದೆ ಈ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ. * ಈ ಹಿಂದೆ 2016 ರ ಆಗಸ್ಟ್‌ ತಿಂಗಳಲ್ಲಿ ಸರ್ಕಾರದ ಅನೇಕ ಸಚಿವಾಲಯಗಳು ಇಲಾಖೆಗಳಿಗೆ ಲಭ್ಯವಿರುವ ವಸ್ತುಗಳನ್ನು ಆನ್‌ಲೈನ್ ಮೂಲಕ ಖರೀದಿಸಲು 'ಇ-ಮಾರ್ಕೆಟ್‌ಪ್ಲೇಸ್‌'ಗೆ ಚಾಲನೆ ನೀಡದೆ. * GEM ಎನ್ನುವುದು ಒಂದು ಸ್ಟಾಪ್ ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್‌ ಕಿರು ರೂಪವಾಗಿದೆ, DGS&D ನಿಂದ ಹೋಸ್ಟ್ ಮಾಡಲಾಗಿದೆ, ಅದರಲ್ಲಿ ಸಾಮಾನ್ಯ ಬಳಕೆದಾರ ಸರಕುಗಳು ಹಾಗೂ ಸೇವೆಗಳನ್ನು ಸಂಗ್ರಹಿಸಬಹುದು. * ಸಾರ್ವಜನಿಕ ಸಂಗ್ರಹಣೆಯು ಸರ್ಕಾರದ ಚಟುವಟಿಕೆಗಳ ಒಂದು ಪ್ರಮುಖ ಭಾಗವಾಗಿದೆ ಹಾಗೂ ಸಾರ್ವಜನಿಕ ಸಂಗ್ರಹಣೆಯಲ್ಲಿನ ಸುಧಾರಣೆಯು ಸದ್ಯದ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಇದು ಒಂದಾಗಿದೆ. ಸರ್ಕಾರಿ ಇ-ಮಾರುಕಟ್ಟೆ ಸ್ಥಳ (gem.gov.in) ಇದೊಂದು ಸರ್ಕಾರದ ಅತ್ಯಂತ ದಿಟ್ಟ ನಡೆಯಾಗಿದೆ. ಸರ್ಕಾರಿ ಸಚಿವಾಲಯಗಳು ಹಾಗೂ ಇಲಾಖೆಗಳು, ಅಷ್ಟೇ ಅಲ್ಲದೇ ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಇನ್ನಿತರ ಉನ್ನತ ಸಂಸ್ಥೆಗಳಿಂದ ಸರಕು ಹಾಗೂ ಸೇವೆಗಳ ಸಂಗ್ರಹಣೆಯನ್ನು ಮಾಡುವ ವಿಧಾನವನ್ನು ಹೊಂದಿದೆ. * ರಾಷ್ಟ್ರೀಯ ಇ-ಆಡಳಿತ ವಿಭಾಗದ ತಾಂತ್ರಿಕ ಸಹಾಯದೊಂದಿಗೆ DGS&D ಎರಡೂ ಉತ್ಪನ್ನಗಳು ಹಾಗೂ ಸೇವೆಗಳ ಸಂಗ್ರಹಣೆಗಾಗಿ GeM ಪೋರ್ಟಲ್ ನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ನ್ನು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವರು 2016 ರ ಆಗಸ್ಟ್. 9 ರಂದು ಆರಂಭಿಸಿದ್ದಾರೆ. ಪ್ರಸ್ತುತ GEM ಪಿಒಸಿ ಪೋರ್ಟಲ್‌ನಲ್ಲಿ ಸರಿ ಸುಮಾರು 150 ಉತ್ಪನ್ನ ವಿಭಾಗಗಳಲ್ಲಿ 7400 ಕ್ಕೂ ಅಧಿಕ ಉತ್ಪನ್ನಗಳು ಹಾಗೂ ಸಾರಿಗೆ ಸೇವೆಯ ನೇಮಕಾತಿಯ ಮಾಹಿತಿ ಲಭ್ಯವಿರಲಿದೆ. ಇದೀಗ 140 ಕೋಟಿಗೂ ಅಧಿಕ ವಹಿವಾಟುಗಳನ್ನು GEM ನ ಮೂಲಕ ಪ್ರಕ್ರಿಯೆಗೊಳಿಸಲಾಗಿದೆ.