Job Description: * ಇತ್ತೀಚಿಗೆ ಭಾರತದ ರಾಜಧಾನಿ ದೆಹಲಿ ವಿಶ್ವದ ಅತ್ಯಂತ ಕೆಟ್ಟ ಮಾಲಿನ್ಯ ರಾಜಧಾನಿಗಳಲ್ಲಿ ಗುರುತಿಸಿಕೊಂಡಿದೆ. 2021 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ವಾಯು ಗುಣಮಟ್ಟದ ಮಾನದಂಡವನ್ನು ಯಾವುದೇ ಒಂದು ದೇಶವು ಪೂರೈಸಿಲ್ಲ ಎಂದು ಸಮೀಕ್ಷೆಯ ವರದಿ ಮಾಡಿದೆ. * ಈ ಸಮೀಕ್ಷೆಯ ಪ್ರಕಾರ ರಾಷ್ಟ್ರ ರಾಜ್ಯಧಾನಿ ನವದೆಹಲಿಯು ವಿಶ್ವದ ಅತ್ಯಂತ ಕೆಟ್ಟ ಮಾಲಿನ್ಯ ರಾಜಧಾನಿಯಾಗಿದೆ. ಇತ್ತೀಚಿಗೆ ಸ್ವಿಸ್ ಮಾಲಿನ್ಯ ತಂತ್ರಜ್ಞಾನ ಕಂಪನಿಯು IQAir ನಡೆಸಿರುವ ಸಮೀಕ್ಷೆಯುಲ್ಲಿ ಸುಮಾರು 6,475 ನಗರಗಳಲ್ಲಿನ ಮಾಲಿನ್ಯದ ಅಂಕಿ-ಅಂಶಗಳನ್ನು ಆಧರಿಸಿವೆ ಎಂದು ರಾಯಿಟರ್ಸ್ ಮಾಹಿತಿಯನ್ನು ನೀಡಿದೆ. * ಕಳೆದ 2021 ರಲ್ಲಿ ಒಟ್ಟಾರೆಯಾಗಿ ಭಾರತದಲ್ಲಿನ ಮಾಲಿನ್ಯದ ಗುಣಮಟ್ಟವು ಹಾಳಾಗಿದೆ. ಇದೀಗ ಬಾಂಗ್ಲಾದೇಶವು ವಿಶ್ವದ ಅತ್ಯಂತ ಕಲುಷಿತ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ, ಹಾಗೂ ಚಾಡ್ 2 ನೇ ಸ್ಥಾನದಲ್ಲಿದೆ. ಆದರೆ ಭಾರತವು ವಿಶ್ವದಲ್ಲಿ 5ನೇ ಅತ್ಯಂತ ಕಲುಷಿತ ರಾಷ್ಟ್ರವಾಗಿದೆ ಎಂದು ಸಮೀಕ್ಷೆಯು ವರದಿ ಮಾಡಿದೆ. * ವಾಯು ಗುಣಮಟ್ಟದ ಈ ಸಮೀಕ್ಷೆಯನ್ನು 'ನೆಲಮಟ್ಟದ ಮೇಲ್ವಿಚಾರಣಾ ಕೇಂದ್ರಗಳಿಂದ ಪಡೆದ PM2.5 ಮಾಪನಗಳಿಂದ ಪ್ರತ್ಯೇಕವಾಗಿ ಕೈಗೊಳ್ಳಲಾಗಿದೆ. ವಾಯು ಗುಣಮಟ್ಟದ ಮಾಹಿತಿಯನ್ನು ಸರ್ಕಾರಗಳು ನಿರ್ವಹಿಸುವ ಕೇಂದ್ರಗಳು ಹಾಗೂ ಖಾಸಗಿ ಒಡೆತನದ ಶಿಕ್ಷಣ ಸಂಸ್ಥೆಗಳು ಹಾಗೂ ಇನ್ನಿತರ ಲಾಭೋದ್ದೇಶವಿಲ್ಲದ ಸಂಸ್ಥೆಗಳು ನಿರ್ವಹಿಸುವ ಕೇಂದ್ರಗಳಿಂದ ಪಡೆದುಕೊಳ್ಳಗಿದೆ. ಇದಕ್ಕಿಂತ ಹೆಚ್ಚಿನ ಡೇಟಾವನ್ನು ನೈಜ ಸಮಯ ಸಂಧರ್ಭಗಳಲ್ಲಿ ಸಂಗ್ರಹಿಸಲಾಗಿದೆ. * * ಟಾಪ್ 10 ವಿಶ್ವದ ಅತ್ಯಂತ ಮಾಲಿನ್ಯ ನಗರಗಳು : * ಭಾರತದ - ದೆಹಲಿ, ಬಾಂಗ್ಲಾದೇಶದ - ಢಾಕಾ, ಚಾಡ್ ನ - ಎನ್ ಜಮೆನಾ, ತಜಿಕಿಸ್ತಾನ್ ದ - ದುಶಾನ್ಬೆ, ಓಮನ್‌ನ ಬಂದರು ರಾಜಧಾನಿ - ಮಸ್ಕತ್, ನೇಪಾಳ - ಕಠ್ಮಂಡು, ಗಲ್ಫ್ ದ್ವೀಪ ರಾಷ್ಟ್ರವಾದ ಬಹ್ರೇನ್‌ನ ಆಧುನಿಕ ರಾಜಧಾನಿ - ಮನಮಾ, ಇರಾಕ್‌ನ - ಬಾಗ್ದಾದ್, ಕಿರ್ಗಿಸ್ತಾನದ - ಬಿಷ್ಕೆಕ್, ಉಜ್ಬೇಕಿಸ್ತಾನ್ - ತಾಷ್ಕೆಂಟ್.