Job Description: * ಇತ್ತೀಚಿಗೆ ಭಾರತ ರತ್ನ ಪ್ರೊ.ಸಿಎನ್‌ಆರ್ ರಾವ್ ಅವರಿಗೆ 2020 ನೇ ಸಾಲಿನ ಎನರ್ಜಿ ಪ್ರೊಂಟೈರ್ಸ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2020 ನೇ ಸಾಲಿನ ಎನರ್ಜಿ ಪ್ರೊಂಟೈರ್ಸ್ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ. * ಇಡೀ ಏಷ್ಯಾ ಖಂಡದಲ್ಲಿಯೇ ಈ ಪ್ರಶಸ್ತಿ ಪಡೆಯುತ್ತಿರುವ ಮೊದಲ ವಿಜ್ಞಾನಿ ಪ್ರೊ.ಸಿಎನ್‌ಆರ್ ರಾವ್ ಅವರಾಗಿದ್ದಾರೆ. * ಈ ಪ್ರಶಸ್ತಿಯನ್ನು ಎನರ್ಜಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ನೀಡಲಾಗುತ್ತದೆ. ಇದು ಇಟಲಿ ದೇಶದ ಸರ್ಕಾರದ ಪ್ರಶಸ್ತಿಯಾಗಿದೆ. ಇದೀಗ ಈ ಪ್ರಶಸ್ತಿಯನ್ನು ಎನರ್ಜಿ ಕ್ಷೇತ್ರದ ನೋಬಲ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ. * ಕರ್ನಾಟಕ ರಾಜ್ಯ ಸರ್ಕಾರ ಈ ಹಿಂದೆ ಈ ಪ್ರಶಸ್ತಿಯನ್ನು ನೀಡುವದಾಗಿ ಘೋಷಣೆ ಮಾಡಿತ್ತು, ಆದರೆ ಕೋವಿಡ್-19 ಕಾರಣದಿಂದಾಗಿ ನೀಡಿರಲಿಲ್ಲ. ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. * ಚಿಂತಾಮಣಿ ನಾಗೇಶ ರಾಮಚಂದ್ರ ರಾವ್(CNR Rao) ಅವರು ಭಾರತೀಯ ರಸಾಯನಶಾಸ್ತ್ರಜ್ಞ ಇವರು ಘನ-ಸ್ಥಿತಿ ಮತ್ತು ರಚನಾತ್ಮಕ ರಸಾಯನಶಾಸ್ತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇವರಿಗೆ ಪ್ರಪಂಚದಾದ್ಯಂತದ 83 ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನು ನೀಡಿವೆ. * ರಾವ್ ಅವರು ಈ ಹಿಂದೆ 1959 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಗೆ ಸೇರಿದ್ದಾರೆ. ಈ ಹಿಂದೆ ಇವರು 1985 ರಿಂದ 1989 ಹಾಗೂ 2005 ರಿಂದ 2014 ರಲ್ಲಿ ಭಾರತೀಯ ಪ್ರಧಾನ ಮಂತ್ರಿಯ ವೈಜ್ಞಾನಿಕ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದರು. * ರಾವ್ ಅವರು ಭಾರತ ಸರ್ಕಾರದಿಂದ ಪದ್ಮಶ್ರೀ ಹಾಗೂ ಪದ್ಮವಿಭೂಷಣವನ್ನೂ ಪಡೆದುಕೊಂಡಿದ್ದಾರೆ. ನಂತರ ಇವರಿಗೆ ಭಾರತ ಸರ್ಕಾರವು 2013 ರ ನವೆಂಬರ್. 16 ರಂದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ 'ಭಾರತ ರತ್ನ' ಪ್ರಶಸ್ತಿಗೆ ಆಯ್ಕೆ ಮಾಡಿತು.