Job Description: * ವಿಶ್ವ ನಂ. 1 ಟೆನಿಸ್‌ ತಾರೆ ಆಸ್ಟ್ರೇಲಿಯಾದ ಜನಪ್ರಿಯ ಆಟಗಾರ್ತಿ ಆಶ್ಲೀ ಬಾರ್ಟಿ ಅವರು ತಮ್ಮ 25 ನೇ ವಯಸ್ಸಿನಲ್ಲಿ ಟೆನಿಸ್‌ನಿಂದ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. * ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ್ತಿ ಬಾರ್ಟಿ '03' ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಜಯಿಸಿಕೊಂಡಿದ್ದಾರೆ. 2019 ರಲ್ಲಿ ಫ್ರೆಂಚ್ ಓಪನ್, 2021 ರಲ್ಲಿ ವಿಂಬಲ್ಡನ್ ಹಾಗೂ ಇದೇ ವರ್ಷದಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಆಶ್ಲೀಗ್ ಬಾರ್ಟಿ ಅವರೊಬ್ಬರು ಆಸ್ಟ್ರೇಲಿಯಾದ ನಿವೃತ್ತ ವೃತ್ತಿಪರ ಟೆನಿಸ್ ಆಟಗಾರ್ತಿ. ಇವರು ವುಮೆನ್ಸ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಸಿಂಗಲ್ಸ್‌ನಲ್ಲಿ ವಿಶ್ವದ ನಂ. 1 ಶ್ರೇಯಾಂಕ ಪಡೆದ 2 ನೇ ಆಸ್ಟ್ರೇಲಿಯಾದ ಟೆನಿಸ್ ಆಟಗಾರ್ತಿಯಾಗಿದ್ದಾರೆ. ಇವರು ತಮ್ಮ ವೃತ್ತಿಜೀವನದ-ಉನ್ನತ ಶ್ರೇಯಾಂಕವನ್ನು ವಿಶ್ವದಲ್ಲಿ 5 ನೇ ಸ್ಥಾನವನ್ನು ಸಾಧಿಸಿದ್ದಾರೆ. ಬಾರ್ಟಿ ಮೂರು ಬಾರಿ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ಆಗಿದ್ದಾರೆ ಇದರ ಜೊತೆಗೆ ವಿಂಬಲ್ಡನ್ ಮತ್ತು ಆಸ್ಟ್ರೇಲಿಯನ್ ಓಪನ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದರು. ಇವರು ಕೊಕೊ ವಾಂಡೆವೆಘೆ ಅವರ ಜೊತೆಗೆ 2018 ರಲ್ಲಿ US ಓಪನ್ ಗೆದ್ದುಕೊಂಡಿರುವ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಚಾಂಪಿಯನ್ ಕೂಡ ಆಗಿದ್ದಾರೆ. * ಆಶ್ಲೀ ಬಾರ್ಟಿ ಅವರು WTA ಟೂರ್‌ನಲ್ಲಿ 15 ಸಿಂಗಲ್ಸ್ ಪ್ರಶಸ್ತಿಗಳನ್ನು ಹಾಗೂ 12 ಡಬಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. * ಬಾರ್ಟಿ ಅವರು ಈ ಹಿಂದೆ 2011 ರಲ್ಲಿ ವಿಂಬಲ್ಡನ್ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ ಬಳಿಕ ವಿಶ್ವದ ನಂಬರ್ 2 ರ ವೃತ್ತಿಜೀವನದ ಉನ್ನತ ಶ್ರೇಣಿಯ ಹಂತವನ್ನು ತಲುಪಿದ್ದಾರೆ. ಇವರು 2014 ರ ಅಂತ್ಯದ ವೇಳೆಗೆ ಟೆನಿಸ್‌ನಿಂದ ಅನಿರ್ದಿಷ್ಟ ವಿರಾಮವನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಮತ್ತೇ 2016 ರ ಆರಂಭದಲ್ಲಿ ಟೆನಿಸ್‌ಗೆ ಮರಳಿದರು. ನಂತರ 2017 ರಲ್ಲಿ ಸಿಂಗಲ್ಸ್‌ನಲ್ಲಿ ಮಲೇಷಿಯನ್ ಓಪನ್‌ನಲ್ಲಿ ತಮ್ಮ ಮೊದಲ WTA ಪ್ರಶಸ್ತಿಯನ್ನು ಜಯಿಸಿಕೊಂಡರು. 2018 ರಲ್ಲಿ ಡಬಲ್ಸ್‌ನಲ್ಲಿ ತನ್ನ ಮೊದಲ ಪ್ರೀಮಿಯರ್ ಮ್ಯಾಂಡೇಟರಿ ಹಾಗೂ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಗಳ ಪ್ರಶಸ್ತಿಗಳನ್ನು ಜಯಿಸಿಕೊಂಡರು. ಇತ್ತೀಚಿಗೆ 2022 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಹಿಂದೆ 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಶ್ರ ಡಬಲ್ಸ್‌ನ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ.