Job Description: * ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಾಖಂಡ ರಾಜ್ಯದ 11 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ. ಇದೀಗ ಇವರು 2 ನೇ ಬಾರಿ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸುತ್ತಿದ್ದಾರೆ. * ಉತ್ತರಾಖಂಡ್ ರಾಜ್ಯವು ಭಾರತದ ಉತ್ತರ ಭಾಗದಲ್ಲಿರುವ ರಾಜ್ಯವಾಗಿದೆ. ಧಾರ್ಮಿಕ ಪ್ರಾಮುಖ್ಯತೆ ಹಾಗೂ ಅನೇಕ ಹಿಂದೂ ದೇವಾಲಯಗಳು, ಹಾಗೂ ಯಾತ್ರಾ ಕೇಂದ್ರಗಳಿಗೆ ಪ್ರಾಮುಖ್ಯತೆಯನ್ನು ಪಡೆದಿದೆ. ಸಾಮಾನ್ಯವಾಗಿ ಈ ರಾಜ್ಯವನ್ನು 'ದೇವಭೂಮಿ' ಎಂದು ಕರೆಯುತ್ತಾರೆ. ಈ ರಾಜ್ಯವು ಚೀನಾದ ಉತ್ತರಕ್ಕೆ ಟಿಬೆಟ್ ಸ್ವಾಯತ್ತ ಪ್ರದೇಶದ ಗಡಿಯನ್ನು ಹೊಂದಿದೆ, ಹಾಗೂ ಪೂರ್ವಕ್ಕೆ ನೇಪಾಳದ ಸುದುರ್ಪಶ್ಚಿಮ್ ಪ್ರಾಂತ್ಯದ ಗಾಡಿಯನ್ನು ಹೊಂದಿದೆ, ಮತ್ತು ದಕ್ಷಿಣಕ್ಕೆ ಉತ್ತರ ಪ್ರದೇಶ, ಪಶ್ಚಿಮ ಮತ್ತು ವಾಯುವ್ಯಕ್ಕೆ ಹಿಮಾಚಲ ಪ್ರದೇಶ ಭಾರತದ ರಾಜ್ಯಗಳ ಗಡಿಯನ್ನು ಹೊಂದಿದೆ. * ಡೆಹ್ರಾಡೂನ್ ನಗರ ಪ್ರದೇಶವು ಉತ್ತರಾಖಂಡ್‌ ರಾಜ್ಯದ ಚಳಿಗಾಲದ ರಾಜಧಾನಿಯಾಗಿದೆ, ಹಾಗೂ ಚಮೋಲಿ ಜಿಲ್ಲೆಯ ಭರರಿಸೈನ್, ಉತ್ತರಾಖಂಡ ರಾಜ್ಯದ ಬೇಸಿಗೆಯ ರಾಜಧಾನಿಯಾಗಿದೆ. ಹಾಗೆಯೆ ಈ ರಾಜ್ಯದ ಉಚ್ಚ ನ್ಯಾಯಾಲಯವು ನೈನಿತಾಲ್‌ನಲ್ಲಿದೆ. * ಈ ಹಿಂದೆ 1990 ರ ದಶಕದಲ್ಲಿ ಈ ರಾಜ್ಯದ ರಾಜ್ಯತ್ವಕ್ಕಾಗಿ ಉತ್ತರಾಖಂಡ ಚಳುವಳಿಯನ್ನು ಆರಂಭಿಸಲಾಯಿತು. ಆ ರಾಜ್ಯದ ಸ್ಥಳೀಯರನ್ನು ಸಾಮಾನ್ಯವಾಗಿ ಉತ್ತರಾಖಂಡಿ ಎನ್ನಲಾಗುತ್ತದೆ. 2011 ರ ಭಾರತದ ಜನಗಣತಿಯ ಪ್ರಕಾರ ಉತ್ತರಾಖಂಡ ರಾಜ್ಯವು ಸರಿ ಸುಮಾರು 10,086,292 ಜನಸಂಖ್ಯೆಯನ್ನು ಹೊಂದಿದೆ, ಇದೀಗ ಈ ರಾಜ್ಯವು ಭಾರತದಲ್ಲಿ 20 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ.