Job Description: * ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ಅವರು ಇತ್ತೀಚಿಗೆ ಹುತಾತ್ಮರ ದಿನದಂದು 'ಭ್ರಷ್ಟಾಚಾರ ತಡೆ ಸಹಾಯವಾಣಿ'ಯನ್ನು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ನಿರೀಕ್ಷೆ ಇದೇ ಎಂದು ತಿಳಿಸಿದ್ದಾರೆ. * ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಈ '9501200200' ಸಹಾಯವಾಣಿಯನ್ನು ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದಾರೆ. * ರಾಜ್ಯದಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಯಾರಾದರೂ ಲಂಚ ಕೇಳಿದರೆ ನಾಗರಿಕರು ಆ ಸಂಧರ್ಭದಲ್ಲಿ ಕೊಟ್ಟು, ಅದೇ ಸಮಯದಲ್ಲಿ ಲಂಚ ತೆಗೆದುಕೊಳ್ಳುತ್ತಿರುವವರ ವಿಡಿಯೊ ಅಥವಾ ಆಡಿಯೊ ರೆಕಾರ್ಡ್‌ ಮಾಡಿಕೊಂಡು ಈ 'ಭ್ರಷ್ಟಾಚಾರ ತಡೆ ಸಹಾಯವಾಣಿ' ಸಂಖ್ಯೆಗೆ ಕಳುಹಿಸಿ ಎಂದು ನೂತನ ಮುಖ್ಯಮಂತ್ರಿ ಮಾನ್‌ ಅವರು ತಿಳಿಸಿದ್ದಾರೆ. ಈ ಸಂಖ್ಯೆಗೆ ಬಂದಿರುವ ದೂರುಗಳನ್ನು ಯಾವುದೇ ಪಕ್ಷಪಾತವಿಲ್ಲದೆ ತನಿಖೆ ಮಾಡಲಾಗುತ್ತದೆ, ಅಷ್ಟೇ ಅಲ್ಲದೇ ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ದೇಶಕ್ಕಾಗಿ ತಮ್ಮ ‍ಪ್ರಾಣವನ್ನು ತ್ಯಾಗ ಮಾಡಿರುವ ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ರಂತಹ ಹುತ್ಮಾತ್ಮರ ದಿನವನ್ನು ಮಾರ್ಚ್ 23 ರಂದು ಆಚರಿಸಲಾಗುತ್ತದೆ, ಇದೇ ದಿನದಂದು ಮುಖ್ಯಮಂತ್ರಿ ಮಾನ್‌ ಅವರು ಈ ಸಹಾಯವಾಣಿಯನ್ನು ಆರಂಭಿಸಿದ್ದಾರೆ. * ಇತ್ತೀಚಿಗೆ ನೂತನ ಮುಖ್ಯಮಂತ್ರಿ ಮಾನ್‌ ಅವರು ಮಾರ್ಚ್. 16 ರಂದು ಭಗತ್ ಸಿಂಗ್ ಅವರ ಸ್ವಗ್ರಾಮವಾದ ಖಟಕಡಕಲಾನ್‌ನಲ್ಲಿ ಪಂಜಾಬ್‌ ರಾಜ್ಯದ 17 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.