Job Description: * ಮುಂಬೈ ನಗರದ 13 ವರ್ಷದ ಬಾಲಕಿ "ಜಿಯಾ ರೈ" ಅವರು 13 ಗಂಟೆ 10 ನಿಮಿಷಗಳ ಕಾಲಾವಕಾಶದಲ್ಲಿ ಪಾಕ್ ಜಲಸಂಧಿಯನ್ನು ಈಜಿ ದಡ ಸೇರಿರುವ ಅತ್ಯಂತ ಕಿರಿಯ ವ್ಯಕ್ತಿ ಇವರಾಗಿದ್ದಾರೆ. * ಇದೇ ಮಾರ್ಚ್. 20 ರಂದು ಜಿಯಾ ಅವರು 29 ಕಿ.ಮೀ. ದೂರವನ್ನು ಕೇವಲ 13 ಗಂಟೆ 10 ನಿಮಿಷಗಳ ಕಾಲಾವಕಾಶದಲ್ಲಿ ಯಶಸ್ವಿಯಾಗಿ ಈಜಿ ದಡ ಸೇರಿದ್ದಾರೆ. ಈ ಮೊದಲು ಬುಲಾ ಚೌಧರಿ ಅವರು 13 ಗಂಟೆ 52 ನಿಮಿಷಗಳ ಕಾಲಾವಕಾಶದಲ್ಲಿ ಈಜಿ ದಡ ಸೇರಿದ್ದರು, ಇದೀಗ ಇವರ ಈ ದಾಖಲೆಯನ್ನು "ಜಿಯಾ ರೈ" ಅವರು ಹಿಮ್ಮೆಟಿದ್ದಾರೆ. ಇವರ ಈ ಸಾಧನೆಯನ್ನು ಭಾರತೀಯ ನೌಕಾಪಡೆಯ ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. * ಪ್ರಸ್ತುತ ಪಾಕ್ ಜಲಸಂಧಿಯನ್ನು ದಾಟಿದ ವಿಶ್ವದ ಅತ್ಯಂತ ಕಿರಿಯ ಹಾಗು ವೇಗದ ಮಹಿಳಾ ಈಜು ಪಟು ಇವರಾಗಿದ್ದಾರೆ. ಇವರಿಗೆ ಹಿರಿಯ ನೌಕಾ ಅಧಿಕಾರಿಗಳು ಹಾಗು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಡಾ ಸಿ ಸೈಲೇಂದ್ರ ಬಾಬು IPS ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. * ಪಾಕ್ ಜಲಸಂಧಿ ಎನ್ನುವದು ಭಾರತದ ತಮಿಳುನಾಡು ರಾಜ್ಯ ಹಾಗು ದ್ವೀಪ ರಾಷ್ಟ್ರ ಶ್ರೀಲಂಕಾದ ಉತ್ತರ ಪ್ರಾಂತ್ಯದ ಜಾಫ್ನಾ ಜಿಲ್ಲೆಯ ನಡುವೆ ಇರುವ ಜಲಸಂಧಿಯಾಗಿದೆ. ಈ ಜಲಸಂಧಿಯು ಈಶಾನ್ಯದಲ್ಲಿ ಬಂಗಾಳಕೊಲ್ಲಿಯನ್ನು ಹಾಗೂ ನೈಋತ್ಯದಲ್ಲಿ ಪಾಕ್ ಕೊಲ್ಲಿಯನ್ನು ಸಂಪರ್ಕಿಸುತ್ತದೆ. ಇದು 85 ಮೈಲುಗಳಷ್ಟು ಉದ್ದವಾಗಿದೆ.