Job Description: * ಎನ್ ಬಿರೇನ್ ಸಿಂಗ್ ಅವರು 2 ನೇ ಬಾರಿಗೆ ಮಣಿಪುರ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮಣಿಪುರದ ಬಿಜೆಪಿಯ ಕೇಂದ್ರ ವೀಕ್ಷಕರಾಗಿರುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಕಿರಣ್ ರಿಜಿಜು ಅವರು ಮಣಿಪುರದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. * ಬೀರೇನ್ ಸಿಂಗ್ ಅವರು ಮಾಜಿ ಫುಟ್ಬಾಲ್ ಆಟಗಾರ ಹಾಗೂ ಪತ್ರಕರ್ತರಾಗಿದ್ದಾರೆ ಅಷ್ಟೇ ಅಲ್ಲದೇ ಮಣಿಪುರದಲ್ಲಿ ಬಿಜೆಪಿ ಪ್ರಚಾರವನ್ನು ಮುಂದಾಳತ್ವ ವಹಿಸಿದ್ದರು. * ಮಣಿಪುರ ಈಶಾನ್ಯ ಭಾರತದ ಒಂದು ರಾಜ್ಯವಾಗಿದೆ, ಇಂಫಾಲ್ ನಗರವು ಇದರ ರಾಜಧಾನಿಯಾಗಿದೆ. ಈ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ ಹಾಗೂ ಪಶ್ಚಿಮಕ್ಕೆ ಅಸ್ಸಾಂ ರಾಜ್ಯಗಳ ಗಡಿಯನ್ನು ಹೊಂದಿದೆ. * ಈ ಹಿಂದೆ 1917 ಹಾಗೂ 1939 ರ ನಡುವೆ ಮಣಿಪುರದ ಕೆಲವು ಜನರು ಪ್ರಜಾಪ್ರಭುತ್ವಕ್ಕಾಗಿ ರಾಜಪ್ರಭುತ್ವದ ಆಡಳಿತಗಾರರಿಗೆ ಒತ್ತಡ ಹೇರಿದರು. 1947 ಆಗಸ್ಟ್. 11 ರಂದು, ಮಹಾರಾಜ ಬುಧಚಂದ್ರ ಭಾರತಕ್ಕೆ ಸೇರ್ಪಡೆಗೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದರು. ಇದಾದ ಬಳಿಕ 1949 ರ ಸೆಪ್ಟೆಂಬರ್. 21 ರಂದು ವಿಲೀನ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಆಗ ಮಣಿಪುರ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಲಾಯಿತು, ಆಗ ಅದು ಭಾಗ C ರಾಜ್ಯವಾಗಲು ಕಾರಣವಾಯಿತು. * 2011 ರ ಜನಗಣತಿಯ ಪ್ರಕಾರ ಮಣಿಪುರ ರಾಜ್ಯದಲ್ಲಿ ಹಿಂದೂ ಧರ್ಮವು ರಾಜ್ಯದಲ್ಲಿ ಪ್ರಮುಖ ಧರ್ಮವಾಗಿದೆ, ಹಾಗೂ ಇನ್ನು ಅನೇಕ ಧರ್ಮಗಳನ್ನೂ ಒಳಗೊಂಡಿದೆ. * ಮಣಿಪುರ ರಾಜ್ಯವು ಅನೇಕ ಕ್ರೀಡೆಗಳಿಗೆ ನೆಲೆಯಾಗಿದೆ ಹಾಗೂ ಮಣಿಪುರಿ ನೃತ್ಯದ ಮೂಲವಾಗಿದೆ.