Job Description: * ಪ್ರಸ್ತುತ ಗಂಗಾ ನದಿಯು ದೇಶದ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಈ ನದಿಯು ಕೋಟ್ಯಂತರ ಜನರ ನಂಬಿಕೆಯ ನದಿಯಾಗಿದೆ. ಅದರಲ್ಲೂ, ಗಂಗಾ ನದಿಯಲ್ಲಿ ಮಿಂದೆದ್ದರೆ ಎಲ್ಲ ಪಾಪಗಳು ಕಳೆಯುತ್ತವೆ ಎಂಬುದು ಸಹ ಹಿಂದೂಗಳ ನಂಬಿಕೆಯಾಗಿದೆ. ಇದೀಗ 'ಗಂಗಾ ನದಿಯ ನೀರು ಸ್ನಾನಕ್ಕೆ ಯೋಗ್ಯವಾಗಿದೆ' ಎಂದು ಕೇಂದ್ರ ಸರ್ಕಾರದ ಕೇಂದ್ರ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ವಿಶ್ವೇಶ್ವರ ಟುಡು ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. * ಇದೀಗ ಗಂಗಾ ನದಿಯ ಯಾವುದೇ ಪಾತ್ರಗಳು ಒಂದರಿಂದ 4 ನೇ ಕೆಟಗರಿಯ ವ್ಯಾಪ್ತಿಯಲ್ಲಿಲ್ಲ. ಆದರೆ ಕೇವಲ '2' ನದಿಪಾತ್ರಗಳು ಕೆಟಗರಿ 5ರ ವ್ಯಾಪ್ತಿಯಲ್ಲಿ ಬರಲಿವೆ ಎಂದಿದ್ದಾರೆ. - ಕೆಟಗರಿ '1' ರ ವ್ಯಾಪ್ತಿಯಲ್ಲಿ ಬಂದರೆ ನದಿ ನೀರು ತುಂಬ ಕಲುಷಿತ. - ಕೆಟಗರಿ 5 ರ ವ್ಯಾಪ್ತಿಗೆ ಬಂದರೆ, ಅತ್ಯಂತ ಕಡಿಮೆ ಪ್ರಮಾಣದ ಕಲುಷಿತ ಇದರ್ಥ. ಇದೀಗ ಈ ಎಲ್ಲ ಮಾನದಂಡಗಳನ್ನು ಪರಿಗಣಿಸಿ ನೋಡಿದರೆ ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿದೆ ಎಂದಿದ್ದಾರೆ. * ಈ ಹಿಂದೆ ನರೇಂದ್ರ ಮೋದಿಯವರು ಗಂಗಾ ನದಿಯ ಸ್ವಚ್ಛತೆಗಾಗಿ ಹೆಚ್ಚಿನ ಆದ್ಯತೆ ನೀಡಿದ್ದಾರೆ, ಇದರ ಹಿನ್ನೆಲೆಯಾಗಿ ಗಂಗಾ ನದಿಯು ಸ್ವಚ್ಛವಾಗಿದೆ, ಈ ಹಿಂದೆ ಗಂಗಾ ನದಿ ಸ್ವಚ್ಛತೆಗಾಗಿ ಪ್ರಧಾನಿ ಮೋದಿ ಅವರು 'ನಮಾಮಿ ಗಂಗೆ ' ಎಂಬ ಯೋಜನೆಯನ್ನು ಆರಂಭಿಸಿದ್ದರು. * ಇದೀಗ ಗಂಗಾ ನದಿ ಸ್ವಚ್ಛತೆಗಾಗಿ ಕೇಂದ್ರ ಸರ್ಕಾರವು ಸರಿ ಸುಮಾರು 30 ಸಾವಿರ ಕೋಟಿ ರೂ. ವೆಚ್ಚ ತಗುಲಲಿದೆ ಎಂದು ಊಹಿಸಿದ್ದರು ಇದಕ್ಕಾಗಿಯೇ ಕೇಂದ್ರ ಸರ್ಕಾರವು ಒಟ್ಟಾರೆಯಾಗಿ 364 ಯೋಜನೆಗಳನ್ನು ಜಾರಿಗೆ ತರಲು ಸಿದ್ಧವಾಗಿದೆ, ಇದೀಗ 183 ಯೋಜನೆಗಳನ್ನು ಪೂರ್ಣಗೊಳಿಸಿದೆ. * ಗಂಗಾ ನದಿಯನ್ನು ಬಾಂಗ್ಲಾದೇಶದಲ್ಲಿ ಪದ್ಮ ನದಿ ಎಂದು ಕರೆಯುತ್ತಾರೆ. ಈ ನದಿಯು ಭಾರತದ ಉತ್ತರಾಖಂಡ ರಾಜ್ಯದಲ್ಲಿ ಪಶ್ಚಿಮ ಹಿಮಾಲಯದಲ್ಲಿ ಉಗಮವಾಗಿದೆ. ಪ್ರಸ್ತುತ ಗಂಗಾ-ಬ್ರಹ್ಮಪುತ್ರ-ಮೇಘನಾ ವ್ಯವಸ್ಥೆಯು ಭೂಮಿಯ ಮೇಲಿನ 3 ನೇ ಅತಿ ದೊಡ್ಡ ನದಿಯಾಗಿದೆ. ಈ ಗಂಗಾ ನದಿಯು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ನದಿಯಾಗಿದೆ. ಹಿಂದೂ ಧರ್ಮದಲ್ಲಿ ಈ ನದಿಯನ್ನು ಗಂಗಾ ದೇವತೆ ಎಂದು ಪೂಜಿಸಲಾಗುತ್ತದೆ.