Job Description: * ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೂಲನ್ ಗೋಸ್ವಾಮಿ ಅವರು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 250 ವಿಕೆಟ್'ಗಳನ್ನೂ ಪಡೆದುಕೊಂಡ ವಿಶ್ವದ ಮೊದಲ ಬೌಲರ್ ಇವರಾಗಿದ್ದಾರೆ. * ಪ್ರಸ್ತುತ ಜೂಲನ್ ಗೋಸ್ವಾಮಿ ಅವರು ಇತ್ತೀಚಿಗೆ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ICC ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಈ ದಾಖಲೆ ಬರೆದಿದ್ದಾರೆ. ಇವರು 199 ನೇ ಏಕದಿನ ಪಂದ್ಯದಲ್ಲಿ ಈ ನೂತನ ದಾಖಲೆ ನಿರ್ಮಿಸಿದ್ದಾರೆ. * ಪ್ರಸ್ತುತ ಮಹಿಳೆಯರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳನ್ನೂ ಪಡೆದಿರುವ ದಾಖಲೆಗೆ ಪಾತ್ರರಾಗಿದ್ದಾರೆ. * ಜೂಲನ್ 2002 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 197 ಏಕದಿನ ಪಂದ್ಯಗಳನ್ನು ಆಡಿರುವ ಅವರು 248 ವಿಕೆಟ್ ಗಳನ್ನೂ ಗಳಿಸಿದ್ದಾರೆ. ಹಾಗೆಯೇ ಜೂಲನ್ ಅವರು 12 ಟೆಸ್ಟ್ ಮತ್ತು 68 T20 ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 44 ಹಾಗೂ 56 ವಿಕೆಟ್ ಗಳು ಅವರ ಖಾತೆಯಲ್ಲಿವೆ.