Job Description: * ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರರಾಗಿದ್ದ ಭಗತ್ ಸಿಂಗ್ ಅವರ ಹುಟ್ಟುರಾಗಿರುವ ಪಂಜಾಬ್ ರಾಜ್ಯದ ಖಟ್ಕರ್ ಕಲನ್'ನಲ್ಲಿ ಆಮ್ ಆದ್ಮಿ ಪಕ್ಷದ(AAP) ಭಗವಂತ್ ಮಾನ್ ಅವರು ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. * ಈ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗಿಯಾಗಿದ್ದರು. * ಭಗವಂತ್ ಮಾನ್ ಅವರು ಅವರು ಈ ಹಿಂದೆ 1970 ರ ನಂತರ ಪಂಜಾಬ್ ರಾಜ್ಯದ ಯುವ ಮುಖ್ಯಮಂತ್ರಿಯಾಗಿದ್ದಾರೆ. ಪ್ರಸ್ತುತ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಭಗವಂತ್ ಮಾನ್ ಅವರಿಗೆ ಪ್ರಮಾಣ ವಚನವನ್ನು ಬೋಧಿಸಿದ್ದಾರೆ. * ಪ್ರಸ್ತುತ ಪಂಜಾಬ್ ವಿಧಾನಸಭಾ 117 ಮಂದಿ ಶಾಸಕರ ಬಲವನ್ನು ಹೊಂದಿದೆ. ಅದರಲ್ಲಿ ಭಗವಂತ್ ಮಾನ್ ಅವರ ಆಮ್ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಜಯಗಳಿಸುವ ಅಧಿಕಾರವನ್ನು ಪಡೆದುಕೊಂಡಿದೆ. ಪಂಜಾಬ ರಾಜ್ಯದ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಸಂಗ್ರೂರ್ ಜಿಲ್ಲೆಯ ಧುರಿ ವಿಧಾನಸಭಾ ಕ್ಷೇತ್ರದ ಮೂಲಕ ಚುನಾವಣೆಯನ್ನು ಗೆದ್ದು ಮುಖ್ಯಮಂತ್ರಿ ಯಾಗಿದ್ದಾರೆ.