Job Description: * ಇದೀಗ ಭಾರತ ಸರ್ಕಾರವು 156 ದೇಶಗಳ ನಾಗರಿಕರಿಗೆ 5 ವರ್ಷಗಳ ಇ-ಟೂರಿಸ್ಟ್ ವೀಸಾ ಹಾಗೂ ಎಲ್ಲಾ ದೇಶಗಳ ಪ್ರಜೆಗಳಿಗೆ ನಿಯಮಿತ ಪೇಪರ್ ವೀಸಾವನ್ನು ತಕ್ಷಣದಿಂದಲೇ ಜಾರಿಗೆ ಮಾಡುವದಾಗಿ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರವು ಈ ಹಿಂದೆ ಕೋವಿಡ್-19 ಹಿನ್ನಲೆಯಿಂದಾಗಿ ಇ- ಟೂರಿಸ್ಟ್ ವೀಸಾ ಪ್ರಕ್ರಿಯೆಯನ್ನು ನಿಲ್ಲಿಸಿತ್ತು. * ಅಮೆರಿಕ ಹಾಗೂ ಜಪಾನ್ ನಾಗರಿಕರಿಗೆ ಈ ಹಿಂದೆ ನೀಡಲಾಗಿರುವ 10 ವರ್ಷಗಳ ಅವಧಿಯ ಟೂರಿಸ್ಟ್ ವೀಸಾವನ್ನು ಮರುಸ್ಥಾಪಿಸಲಾಗಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. * ಟೂರಿಸ್ಟ್ ಹಾಗೂ ಇ-ಟೂರಿಸ್ಟ್ ವೀಸಾ ಹೊಂದಿರುವ ವಿದೇಶಿಯರು ಭಾರತ ದೇಶವನ್ನು ನಿರ್ದಿಷ್ಟ ಸೀ ಇಮಿಗ್ರೇಷನ್ ಚೆಕ್ ಪೋಸ್ಟ್ ಅಥವಾ ವಿಮಾನ ನಿಲ್ದಾಣದ ಇಮಿಗ್ರೇಷನ್ ಚೆಕಿಂಗ್'ಗೆ ಒಳಪಟ್ಟ ನಂತರ ಪ್ರವೇಶವನ್ನು ಪಡೆದಬಹುದಾಗಿದೆ. ಆದರೆ ವಿದೇಶಿಯರು ಭೂಗಡಿ ಅಥವಾ ನದಿ ಮುಖಾಂತರ ಭಾರತವನ್ನು ಪ್ರವೇಶ ಪಡೆಯಲು ಅವಕಾಶ ವಿರುವದಿಲ್ಲ ಎಂದು ತಿಳಿಸಿದ್ದಾರೆ. * ಇ-ವೀಸಾ ಸಂದರ್ಶಕರಿಗೆ ಭಾರತೀಯ ಮಿಷನ್‌ಗೆ ಭೇಟಿ ನೀಡದೆ ಆನ್‌ಲೈನ್‌ನಲ್ಲಿ ಅವರ ತಾಯ್ನಾಡಿನಿಂದ ಭಾರತೀಯ ವೀಸಾಕ್ಕೆ ಅರ್ಜಿ ಸಲ್ಲಿಸಲು ಹಾಗೂ ಆನ್‌ಲೈನ್‌ನಲ್ಲಿ ವೀಸಾ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗುತ್ತದೆ. ಆನ್‌ಲೈನ್‌ನಲ್ಲಿ ವೀಸಾ ಒಂದು ಬಾರಿ ಅನುಮೋದಿಸಿದ ಬಳಿಕ ಅವರಿಗೆ ಭಾರತಕ್ಕೆ ಪ್ರಯಾಣವನ್ನು ಬೆಳೆಸಲು ಅಧಿಕಾರ ನೀಡುವ ಇಮೇಲ್ ನ್ನು ನೀಡಲಾಗುತ್ತದೆ, ಅದರಿಂದಾಗಿ ಅವರು ಪ್ರಯಾಣಿಸಬಹುದು. * ಇ-ವೀಸಾವನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳು: ಇ-ಟೂರಿಸ್ಟ್ ವೀಸಾ, ಇ-ಬಿಸಿನೆಸ್ ವೀಸಾ, ಇ-ಮೆಡಿಕಲ್ ವೀಸಾ, ಇ-ಕಾನ್ಫರೆನ್ಸ್ ಮತ್ತು ಇ-ಮೆಡಿಕಲ್ ಅಟೆಂಡೆಂಟ್ ಎಂದು ವಿಂಗಡಿಸಲಾಗಿದೆ. * ಇ-ಟೂರಿಸ್ಟ್ ಮತ್ತು ಇ-ಬಿಸಿನೆಸ್ ವೀಸಾದ ಭಾರತದಲ್ಲಿ ವಾಸಿಸುವ ಅವಧಿಯು ಗರಿಷ್ಠ 1 ವರ್ಷದವರೆಗೆ ಇರುತ್ತದೆ. ಈ ಸೌಲಭ್ಯವು ಜನರನ್ನು ಕಡಿಮೆ ಸಮಯದಲ್ಲಿ ಪ್ರಯಾಣಿಸಲು, ಹಾಗೂ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸುವಾಗ ಮಾರ್ಗಗಳ ಮೂಲಕ ಪ್ರಯಾಣ ಬೆಳೆಸಲು ಹಾಗೂ ವ್ಯಾಪಾರ ಭೇಟಿಗಳಲ್ಲಿ ಕುಟುಂಬ ಸದಸ್ಯರನ್ನು ಕರೆತರಲು ಅವಕಾಶವನ್ನು ನೀಡಲಾಗುತ್ತದೆ. * ಈ ಹಿಂದೆ 2014 ರ ನವೆಂಬರ್. 27 ರಂದು ಭಾರತ ಸರ್ಕಾರವು ಇ-ವೀಸಾ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯನ್ನು 166 ದೇಶಗಳಿಗೆ ವಿಸ್ತರಣೆ ಮಾಡಿದೆ. ಇ-ವೀಸಾ ಸೇವೆಯನ್ನು ಕಲ್ಪಿಸಲು 28 ಭಾರತೀಯ ವಿಮಾನ ನಿಲ್ದಾಣಗಳು ಹಾಗೂ 5 ಭಾರತೀಯ ಬಂದರುಗಳನ್ನು ಗುರುತಿಸಲಾಗಿದೆ.