Job Description: * ಇದೀಗ ಇಸ್ಲಾಮಿಕ್ ಸಹಕಾರ ಸಂಘಟನೆಯ ಪರವಾಗಿ ಪಾಕಿಸ್ತಾನವು ಮಾಡಿಸಿರುವ ನಿರ್ಣಯವನ್ನು ಇತ್ತೀಚಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸಹ ಮತದಿಂದ ಅಂಗೀಕರಿಸಿದೆ. ಈ ನಿರ್ಣಯದಲ್ಲಿ ಮಾರ್ಚ.15 ನ್ನು ಇಸ್ಲಾಮೊಫೋಬಿಯಾವನ್ನು ಎದುರಿಸಲು ಅಂತರರಾಷ್ಟ್ರೀಯ ದಿನವಾಗಿ ಘೋಷಣೆ ಮಾಡಲಾಗಿದೆ. * ಇಸ್ಲಾಮಿಕ್ ಸಹಕಾರ ಸಂಘಟನೆಯ 57 ಸದಸ್ಯ ದೇಶಗಳು ಮತ್ತು ಚೀನಾ ಹಾಗೂ ರಷ್ಯಾ ಸೇರಿ ಇನ್ನು '8' ರಾಷ್ಟ್ರಗಳು ನಿರ್ಣಯದ ಪ್ರಾಯೋಜಿತವನ್ನು ವಹಿಸಿದ್ದವು. ಹಾಗೂ ಅನೇಕ ಸದಸ್ಯ ರಾಷ್ಟ್ರಗಳು ನಿರ್ಣಯವನ್ನು ಶ್ಲಾಘಿಸಿದ್ದವು, ಆದರೆ ಇದಕ್ಕೆ ಭಾರತ, ಫ್ರಾನ್ಸ್ ಹಾಗೂ ಐರೋಪ್ಯ ಒಕ್ಕೂಟದ ಪ್ರತಿನಿಧಿಗಳು ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು. * ಭಾರತೀಯ ರಾಯಭಾರಿ ಟಿ.ಎಸ್.ಗುರುಮೂರ್ತಿ ಅವರು ಬೇರೆ ಬೇರೆ ಧರ್ಮಗಳಲ್ಲಿ ಹಿಂದು ವಿರೋಧಿ ಫೋಬಿಯಾದ ನಿರ್ಣಯವು ಒಳಗೊಂಡಿಲ್ಲ ಎಂದು ವಿಶ್ವಸಂಸ್ಥೆಗೆ ತೆಗಳಿದ್ದರು. * ಇದೆಲ್ಲದರ ನಡುವೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮುಸ್ಲಿಮ್ ಸಮುದಾಯಕ್ಕೆ ಅಭಿನಂದಿಸಿದ್ದಾರೆ. ಸದ್ಯ ವಿಶ್ವವು ಎದುರಿಸುತ್ತಿರುವ ಇಸ್ಲಾಮೊಫೋಬಿಯಾ, ಧಾರ್ಮಿಕ ಚಿಹ್ನೆಗಳು ಹಾಗೂ ಆಚರಣೆಗಳಿಗೆ ಗೌರವ,ಮುಸ್ಲಿಮರ ವಿರುದ್ಧ ದ್ವೇಷ ಹಾಗೂ ತಾರತಮ್ಯ ನಿಲ್ಲಿಸುವ ಸವಾಲನ್ನು ಇದೀಗ ವಿಶ್ವಸಂಸ್ಥೆಯು ಗುರುತಿಸಿದೆ ಎಂದಿದ್ದಾರೆ. * ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಂ ಅವರು ಈ ಇಸ್ಲಾಮೊಫೋಬಿಯಾ ವಾಸ್ತವವಾಗಿದೆ ಎಂದು ವಿಶ್ವಸಂಸ್ಥೆಗೆ ಹೇಳಿದ್ದಾರೆ. * ಇಸ್ಲಾಂ ಅಬ್ರಹಾಮಿಕ್, ಏಕದೇವತಾವಾದಿ ಹಾಗೂ ದೇವರ ಸಾರ್ವತ್ರಿಕ ಧರ್ಮವಾಗಿದೆ. ಇದು ಸರಿ ಸುಮಾರು 1.9 ಶತಕೋಟಿ ಅನುಯಾಯಿಗಳು ಅಂದರೆ ವಿಶ್ವದ ಜನಸಂಖ್ಯೆಯ 24.9% ವಿಶ್ವದ 2 ನೇ ಅತಿದೊಡ್ಡ ಧರ್ಮವಾಗಿದೆ. ಇಸ್ಲಾಂ ಧರ್ಮದ ಪ್ರಾಥಮಿಕ ಗ್ರಂಥ ಖುರಾನ್, ಇದನ್ನು ಮುಸ್ಲಿಮರು ದೇವರ ಪದಗಳು ಎಂದು ನಂಬಿದ್ದಾರೆ. * ಪ್ರಾಚೀನದಿಂದಲೂ, ಇಸ್ಲಾಂ ಧರ್ಮವು 7 ನೇ ಶತಮಾನದ ಅರೇಬಿಯನ್ ಪೆನಿನ್ಸುಲಾ, ಮೆಕ್ಕಾದಲ್ಲಿ ಹುಟ್ಟಿಕೊಂಡಿದೆ. 8 ನೇ ಶತಮಾನದ ಸಮಯಕ್ಕೆ ಇದು ಉಮಯ್ಯದ್ ಕ್ಯಾಲಿಫೇಟ್ ಐಬೇರಿಯನ್ ಪರ್ಯಾಯ ದ್ವೀಪದಿಂದ ಹಿಡಿದು ಸಿಂಧೂ ನದಿಯ ಪಶ್ಚಿಮದವರೆಗೆ ವಿಸ್ತರಿಸಿದೆ.