Job Description: * ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವು ಇದೀಗ 21 ನೇ ದಿನ ಬಂದು ತಲುಪಿದೆ. ಇದೀಗ ವಿಶ್ವಸಂಸ್ಥೆಯ ಕೋರ್ಟ್ ರಷ್ಯಾಗೆ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸುವಂತೆ ಆದೇಶವನ್ನು ನೀಡಿದೆ. * ಕಳೆದ ಕೆಲ ದಿನಗಳಿಂದ ಉಕ್ರೇನ್ ರಾಷ್ಟ್ರವು ವಿಶ್ವ ನ್ಯಾಯಾಲಯ ಎನ್ನಲಾಗುವ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ನ್ನು ಮಧ್ಯಪ್ರವೇಶಿಸುವಂತೆ ಕೇಳಿ ಕೊಂಡಿತ್ತು. * ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್, ಇದನ್ನು ವಿಶ್ವ ನ್ಯಾಯಾಲಯ ಎಂದು ಕರೆಯಲಾಗುತ್ತದೆ. ಇದು ಯುನೈಟೆಡ್ ನೇಷನ್ಸ್ (UN)ನ '6' ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದೊಂದು ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ರಾಜ್ಯಗಳ ನಡುವಿನ ವಿವಾದಗಳನ್ನು ಬಗೆಹರಿಸುವ ಹಾಗೂ ಅಂತರಾಷ್ಟ್ರೀಯ ಕಾನೂನು ವಿಷಯಗಳ ಬಗೆಗಿನ ಸಲಹೆ ಅಭಿಪ್ರಾಯಗಳನ್ನು ಒದಗಿಸುತ್ತದೆ. ಇದೊಂದು ICJ ದೇಶಗಳ ನಡುವಿನ ಸಾಮಾನ್ಯ ವಿವಾದಗಳನ್ನು ಪರಿಹರಿಸುವ ಏಕೈಕ ಅಂತರರಾಷ್ಟ್ರೀಯ ನ್ಯಾಯಾಲಯವಾಗಿದೆ. * ಈ ICJ ಯು ಹಿಂದೆ 1920 ರಲ್ಲಿ ಲೀಗ್ ಆಫ್ ನೇಷನ್ಸ್ ಸ್ಥಾಪಿಸಿರುವ ಪರ್ಮನೆಂಟ್ ಕೋರ್ಟ್ ಆಫ್ ಇಂಟರ್ನ್ಯಾಷನಲ್ ಜಸ್ಟಿಸ್ (PCIJ) ನ ಉತ್ತರಾಧಿಕಾರಿಯಾಗಿದೆ. 2 ನೇ ಮಹಾಯುದ್ಧದ ಬಳಿಕ ಲೀಗ್ ಹಾಗೂ PCIJ ಎರಡನ್ನೂ ಕ್ರಮವಾಗಿ ಯುನೈಟೆಡ್ ನೇಷನ್ಸ್ ಹಾಗೂ ICJ ನಿಂದ ಬದಲಾಯಿಸಲಾಗಿದೆ. * ICJ ಯು '9' ವರ್ಷಗಳ ಅವಧಿಗೆ UN ಜನರಲ್ ಅಸೆಂಬ್ಲಿ ಹಾಗೂ ಭದ್ರತಾ ಮಂಡಳಿ ವತಿಯಿಂದ ಚುನಾಯಿತರಾಗಿರುವ 15 ನ್ಯಾಯಾಧೀಶರ ಸಮಿತಿಯನ್ನು ಹೊಂದಿದೆ. ಪ್ರಸ್ತುತ ನೆದರ್‌ಲ್ಯಾಂಡ್ಸ್‌ನ ಹೇಗ್‌ನಲ್ಲಿ ಪೀಸ್ ಪ್ಯಾಲೇಸ್‌ನಲ್ಲಿನ ICJ ನ್ಯೂಯಾರ್ಕ್ ನಗರದಲ್ಲಿ ಇರದ ಏಕೈಕ ಪ್ರಮುಖ UN ಅಂಗವಾಗಿದೆ. ಇದು ಇಂಗ್ಲಿಷ್ ಮತ್ತು ಫ್ರೆಂಚ್ ಎಂಬ ಅಧಿಕೃತ ಕಾರ್ಯ ಭಾಷೆಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. * ಈ ICJ 2021 ರ ಸೆಪ್ಟೆಂಬರ್ ವೇಳೆಗೆ 181 ಪ್ರಕರಣಗಳನ್ನು ಪರಿಗಣಿಸಿದೆ.