Job Description: * ಪ್ರಸ್ತುತ ಆಸ್ಕರ್ ಪ್ರಶಸ್ತಿ ವಿಜೇತ ಅಮೇರಿಕದ ಹಿರಿಯ ನಟ ವಿಲಿಯಂ ಹರ್ಟ್ ಅವರು ವಿಧಿವಶರಾಗಿದ್ದರೆ. ವಿಲಿಯಂ ಹರ್ಟ್ ಅವರು ಅಭಿನಯಿಸಿರುವ 'ದಿ ಬಿಗ್ ಚಿಲ್ಲ್' ಹಾಗೂ 'ಎ ಹಿಸ್ಟರಿ ಆಫ್ ವಾಯ್ಲೆನ್ಸ್' ವ್ಯಾಪಕವಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. * ಈ ಹಿಂದೆ 1983ರಲ್ಲಿ ವಿಲಿಯಂ ಹರ್ಟ್ ಅವರು ಗೋರ್ಕಿ ಪಾರ್ಕ್ ಚಲನಚಿತ್ರದಲ್ಲಿ ರಷ್ಯನ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು, ಮತ್ತೇ 1990ರಲ್ಲಿ ವುಡಿ ಆಲೆನ್ ಅವರು 'ಆಲಿಸ್ ಚಿತ್ರದಲ್ಲಿ ಮತ್ತು 1991ರಲ್ಲಿ "ಅಂಟಿಲ್ ದಿ ಎಂಡ್ ಆಫ್ ದಿ ವರ್ಲ್ಡ್" ಚಿತ್ರದಲ್ಲಿ ಕುರುಡರಿಗೆ ಸಹಾಯವಾಗುವ ಯಂತ್ರವನ್ನು ನಿರ್ಮಿಸುವ ವ್ಯಕ್ತಿಯ ಪಾತ್ರದಲ್ಲಿ ಹೆಚ್ಚಿನ ಜನರ ಪ್ರೀತಿಯನ್ನು ಗಳಿಸಿದ್ದರು. * ಆಸ್ಕರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅಕಾಡೆಮಿ ಪ್ರಶಸ್ತಿಗಳು ಇವು ಚಲನಚಿತ್ರೋದ್ಯಮದಲ್ಲಿ ಕಲಾತ್ಮಕ ಮತ್ತು ತಾಂತ್ರಿಕ ಅರ್ಹತೆಗಾಗಿ ಪ್ರಶಸ್ತಿಗಳಾಗಿವೆ. ವಿಶ್ವಾದ್ಯಂತ ಮನರಂಜನಾ ಉದ್ಯಮದಲ್ಲಿ ಈ ಪ್ರಶಸ್ತಿಗಳು ಅನೇಕರು ಪಡೆದುಕೊಂಡಿದ್ದಾರೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ವತಿಯಿಂದ ವಾರ್ಷಿಕವಾಗಿ ಪ್ರಧಾನ ಮಾಡಲಾಗುವ ಪ್ರಶಸ್ತಿಗಳು, ಬೇರೆ ಬೇರೆ ವರ್ಗದ ವಿಜೇತರಿಗೆ ಗೋಲ್ಡನ್ ಪ್ರತಿಮೆಯ ಪ್ರತಿಯನ್ನು ಟ್ರೋಫಿಯಾಗಿ ನೀಡಲಾಗುತ್ತದೆ. ಆದರೆ ಇದನ್ನು ಅಧಿಕೃತವಾಗಿ "ಅಕಾಡೆಮಿ ಅವಾರ್ಡ್ ಆಫ್ ಮೆರಿಟ್" ಎಂದು ಕರೆಯಲಾಗುತ್ತದೆ, ಆದರೂ ಇದನ್ನು ಸಾಮಾನ್ಯವಾಗಿ "ಆಸ್ಕರ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ.