Job Description: * ಪ್ರಸ್ತುತ ರಷ್ಯಾ ದೇಶವು ಉಕ್ರೇನ್ ಮೇಲೆ ಯುದ್ಧವನ್ನು ನಡೆಸುತ್ತಿದೆ. ಇದೀಗ ರಷ್ಯಾ ಸೇನೆಯು ಉಕ್ರೇನ್ ಮೇಲೆ ಯುದ್ಧವನ್ನು ಘೋಷಣೆ ಮಾಡಿ ಅನೇಕ ದಿನಗಳು ಕಳೆದಿವೆ, ಈ ಸಮಯದಲ್ಲಿ ಅಮೇರಿಕ ಅಧ್ಯಕ್ಷ ಜೋ ಬಿಡೆನ್ ಅವರು ರಷ್ಯಾ ತೈಲ ಆಮದಿಗೆ ನಿಷೇಧವನ್ನು ಹೇರಿದ್ದಾರೆ ಎಂದು ವರದಿಯಾಗಿದೆ. * ಈ ಬಗ್ಗೆ ಅಮೇರಿಕ ಶ್ವೇತಭವನವು ಮಾಹಿತಿಯನ್ನು ನೀಡಿದೆ, ಮುಖ್ಯವಾಗಿ ರಷ್ಯಾ ಉಕ್ರೇನ್ ಮೇಲಿ ಯುದ್ಧವನ್ನು ಸಾರಿರುವ ಹಿನ್ನಲೆಯಿಂದಾಗಿ ಅಮೇರಿಕ ಈ ನಿರ್ಧಾರವನ್ನು ಕೈಗೊಂಡಿದೆ. * ಜೋ ಬಿಡೆನ್ ಅವರು ಅಮೇರಿಕನ್ ರಾಜಕಾರಣಿ, ಇವರು ಯುನೈಟೆಡ್ ಸ್ಟೇಟ್ಸ್‌ನ 46 ನೇ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ 2009 ರಿಂದ 2017 ರವರೆಗೆ ಇವರು 47 ನೇ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. * ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಅವರು 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಸೋಲಿಸುವ ಮೂಲಕ ಅಮೇರಿಕದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗೆ ಜೋ ಬಿಡೆನ್ ಅವರು 2021 ರ ಸೆಪ್ಟೆಂಬರ್ ನಲ್ಲಿ ಅಫ್ಘಾನಿಸ್ತಾನ ದೇಶದಿಂದ US ಸೈನ್ಯವನ್ನು ಮರಳಿ ತನ್ನ ಪ್ರದೇಶಕ್ಕೆ ಕರೆಸಿಕೊಂಡಿದೆ. ಆ ಸಂಧರ್ಭದಲ್ಲಿ ಅಫ್ಘಾನ್ ಸರ್ಕಾರವು ಪತನವಾಗಿ ಇದೀಗ ಅಲ್ಲಿ ತಾಲಿಬಾನಿಗಳು ಸರ್ಕಾರವನ್ನು ನಡೆಸುತ್ತಿದ್ದಾರೆ.