Job Description: * ಪ್ರಸ್ತುತ ಸೀರಮ್ ಇನ್‌ ಸ್ಟಿಟ್ಯೂಟ್‌ ನ Covovax ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ ನೀಡಲು DCGI ಅನುಮೋದನೆ ನೀಡಿದೆ. ಈ ಮಾಹಿತಿಯನ್ನು ಸೀರಮ್ ಇನ್‌ ಸ್ಟಿಟ್ಯೂಟ್ ಆಫ್ ಇಂಡಿಯಾದ CEO ಆದಾರ್ ಪೂನಾವಾಲಾ ಅವರು ನೀಡಿದ್ದಾರೆ. * ಇತ್ತೀಚಿಗಿನ ಜಾಗತಿಕ ಪ್ರಯೋಗಗಳಲ್ಲಿ Novavax ಶೇ. 90 ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಇದೀಗ DCGI ವಯಸ್ಕರಿಗೆ ಹಾಗೂ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತುಗಿ ಈ ಲಸಿಕೆಯನ್ನು ನೀಡಲು ಅನುಮತಿಯನ್ನು ನೀಡಿದೆ. * * ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) : ಭಾರತ ಸರ್ಕಾರದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನ ವಿಭಾಗದ ಮುಖ್ಯಸ್ಥರಾಗಿದೆ, ರಕ್ತ ಹಾಗೂ ರಕ್ತ ಉತ್ಪನ್ನಗಳು, IV ದ್ರವಗಳು, ಲಸಿಕೆಗಳು ಹಾಗೂ ನಿರ್ದಿಷ್ಟ ವರ್ಗಗಳ ಔಷಧಿಗಳ ಪರವಾನಗಿಗಳ ಅನುಮೋದನೆಗೆ ಜವಾಬ್ದಾರಿಯನ್ನು ಹೊಂದಿದೆ. ಪ್ರಸ್ತುತ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುತ್ತದೆ. * ಪ್ರಸ್ತುತ DCGI ಭಾರತದಲ್ಲಿ ಔಷಧಗಳ ತಯಾರಿಕೆ, ಮಾರಾಟ, ಆಮದು ಹಾಗೂ ವಿತರಣೆಗೆ ಮಾನದಂಡಗಳನ್ನು ನಿಗದಿಪಡಿಸುವ ಹಕ್ಕನ್ನು ಹೊಂದಿದೆ. * ಸರ್ಕಾರವು ಈ ಹಿಂದೆ 2019 ರ ಆಗಸ್ಟ್. 14 ರಂದು Dr. VG ಸೋಮಾನಿ ಅವರನ್ನು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಆಗಿ ನೇಮಿಸಿದೆ. ಪ್ರಸ್ತುತ DCGI ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಾದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್'ನ ಮುಖ್ಯಸ್ಥರಾಗಿದ್ದಾರೆ.