Job Description: * ಧೂಮಪಾನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಧೂಮಪಾನಗಳಂತಹ ಚಟಗಳನ್ನು ಬಿಡುವಂತೆ ಜನರಿಗೆ ತಿಳಿಸಲಾಗುತ್ತದೆ. ಪ್ರತಿ ವರ್ಷ ಮಾರ್ಚ್ 2ನೇ ದಿನದಂದು ಧೂಮಪಾನ ರಹಿತ ದಿನವನ್ನು ಆಚರಣೆ ಮಾಡಲಾಗುತ್ತದೆ. * ಪ್ರಸ್ತುತ ವರ್ಷದಲ್ಲಿ 'ನೋ ಸ್ಮೋಕಿಂಗ್ ಡೇ'ಯನ್ನು ಇದೇ ಮಾರ್ಚ್. 09 ರಂದು ಆಚರಿಸಲಾಗಿದೆ. ಈ ದಿನವನ್ನು ತಂಬಾಕು ಮುಕ್ತ ದೇಶವನ್ನು ಕಾಣುವ ಉದ್ದೇಶದಿಂದ ಪ್ರಮುಖವಾಗಿ ಅಮೇರಿಕದಲ್ಲಿ ಆಚರಣೆ ಮಾಡಲಾಗುತ್ತದೆ. * ಇದೀಗ ದೇಶದಲ್ಲಿ ಹೆಚ್ಚಿನ ಜನರು ಧೂಮಪಾನಗಳಂತಹ ಚಟಗಳಿಗೆ ಒಳಗಾಗುತ್ತಿದ್ದಾರೆ, ಇದಕ್ಕೆ ಮುಖ್ಯವಾಗಿ ಯುನೈಟೆಡ್ ಕಿಂಗ್‌ಡಮ್ ಪ್ರಮುಖ ಉದಾಹರಣೆಯಾಗಿದೆ. ಈ ಹಿಂದೆ 1984 ರಲ್ಲಿ ಈ ದಿನವನ್ನು ಮೊದಲ ಬಾರಿಗೆ ಧೂಮಪಾನ ದಿನವನ್ನು ಆಚರಣೆ ಮಾಡಲಾಗಿದೆ. ಪ್ರಸ್ತುತ ಈ ದಿನವನ್ನು ಯುನೈಟೆಡ್ ಕಿಂಗ್‌ಡಮ್‌ ಹಾಗೂ ಇತರ ದೇಶಗಳಲ್ಲಿ ವಾರ್ಷಿಕ ಕಾರ್ಯಕ್ರಮವಾಗಿ ಆಚರಣೆ ಮಾಡಲಾಗುತ್ತದೆ. * ಈ ದಿನವು ವ್ಯಸನಕಾರಿ ಧೂಮಪಾನಿಗಳು ಧೂಮಪಾನವನ್ನು ಶಾಶ್ವತವಾಗಿ ಕೈ ಬಿಡಲು ಸೂಚಿಸುತ್ತದೆ, ಈ ಕಾರಣಕ್ಕಾಗಿ ಧೂಮಪಾನ ದಿನವನ್ನು ಆರಂಭಿಸಲಾಗಿದೆ. ಅಷ್ಟೇ ಅಲ್ಲದೇ ಈ ದಿನವು ಆರೋಗ್ಯ ಜಾಗೃತಿ ದಿನವಾಗಿದೆ. ಇದೀಗ ಧೂಮಪಾನವನ್ನು ತ್ಯಜಿಸುವುದು ಈಗಾಗಲೇ ಪ್ರೇರಣೆಯನ್ನು ಪಡೆದುಕೊಂಡಿದೆ. ನಿಯಮಿತವಾಗಿ ಧೂಮಪಾನ ಮಾಡುವವರು ಅನೇಕ ಖಾಯಿಲೆಗಳಿಗೆ ಒಳಗಾಗುತ್ತಾರೆ ಈ ಕಾರಣದಿಂದಾಗಿ ಈ ಕೆಟ್ಟ ಚಟವನ್ನು ಕೈ ಬಿಡುವಂತೆ ಈ ದಿನವು ಸೂಚಿಸುತ್ತದೆ. * ಇದೀಗ ಕ್ಯಾನ್ಸರ್‌ಗೆ ಕಾರಣವಾಗುವ ಗುಟ್ಕಾ ಹಾಗೂ ತಂಬಾಕು ಬಳಕೆ ಮೇಲಿನ ನಿಯಂತ್ರಣಕ್ಕಾಗಿ ಭಾರತೀಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ, ಇದರ ಹೊರತಾಗಿಯೂ ಭಾರತದಲ್ಲಿ 16-64 ವಯೋಮಾನದವರು ಒಟ್ಟಾರೆಯಾಗಿ 25 ಕೋಟಿಗಿಂತ ಅಧಿಕ ಜನರು ಧೂಮಪಾನ ಚಟಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಧೂಮಪಾನ ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 2 ನೇ ಸ್ಥಾನ ಪಡೆದುಕೊಂಡಿದೆ ಎಂದು ಮಾಹಿತಿ ಲಭ್ಯವಾಗಿದೆ. * ಪ್ರಸ್ತುತ ಭಾರತ ಹಾಗೂ ಚೀನಾದ 16 ರಿಂದ 64 ವರ್ಷದೊಳಗಿನ 50 ಕೋಟಿಗಿಂತಲೂ ಅಧಿಕ ಜನರು ತಂಬಾಕು ವ್ಯಸನಿಗಳಾಗಿದ್ದಾರೆ. ಈ ಮಾಹಿತಿಯನ್ನ ಇತ್ತೀಚಿಗೆ 'ದಿ ಇಂಟರ್‌ನ್ಯಾಷನಲ್‌ ಕಮಿಷನ್‌ ಟು ರೀಗ್ನೈಟ್‌ ದಿ ಫೈಟ್‌ ಅಗೇನ್ಸ್ಟ್‌ ಸ್ಮೋಕಿಂಗ್‌' ಎಂಬ ಸಂಸ್ಥೆ ವರದಿ ಮಾಡಿದೆ.