Job Description: * ಇತ್ತೀಚಿಗೆ ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕಾರ್ಮಿಕರ ಪಿಂಚಣಿ ನಿಧಿಗೆ ಕೊಡುಗೆ ನೀಡಲು ಪ್ರಧಾನ ಮಂತ್ರಿ ಶ್ರಮ ಯೋಜನೆಯ ಅಡಿಯಲ್ಲಿ 'ಡೊನೇಟ್ ಎ ಪೆನ್ಷನ್ ಯೋಜನೆ' (Donate-a-Pension scheme) ಪ್ರಾರಂಭಿಸಿದೆ. * ಪ್ರಸ್ತುತ ಪ್ರಧಾನಮಂತ್ರಿ ಶ್ರಮ್ ಅಡಿಯಲ್ಲಿ "ದಾನ-ಎ-ಪಿಂಚಣಿ" ಕಾರ್ಯಕ್ರಮಕ್ಕೆ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಭೂಪೇಂದರ್ ಯಾದವ್ ಅವರು ಚಾಲನೆ ನೀಡಿದ್ದಾರೆ. ಇದರಿಂದಾಗಿ ಸಿಬ್ಬಂದಿಗೆ ಪಿಂಚಣಿ ನಿಧಿಯನ್ನು ರಚಿಸುವ ಹಾಗೂ ಕೊಡುಗೆ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಬಹುದಾಗಿದೆ ಎಂದರು. * ಈ 'ದಾನ-ಎ-ಪಿಂಚಣಿ' ಕಾರ್ಯಕ್ರಮಕ್ಕೆ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅವರು ತೋಟಗಾರನಿಗೆ ದೇಣಿಗೆ ನೀಡುವ ಮೂಲಕ ಚಾಲನೆ ನೀಡಿದ್ದಾರೆ. ಇದೊಂದು ಪಿಂಚಣಿ ಯೋಜನೆಯ ಅಡಿಯಲ್ಲಿ ಆರಂಭವಾಗಿರುವ ಉಪಕ್ರಮವಾಗಿದೆ, ಈ ಉಪಕ್ರಮದಿಂದಾಗಿ ನಾಗರಿಕರು ತಮ್ಮ ತಕ್ಷಣದ ಬೆಂಬಲ ಸಿಬ್ಬಂದಿಗಳಿಗೆ, ಮನೆ ಕೆಲಸಗಾರರು, ಚಾಲಕರು, ಸಹಾಯಕರು ಇನ್ನು ಅನೇಕರಿಗೆ ಪ್ರೀಮಿಯಂ ಕೊಡುಗೆ ಲಭ್ಯವಾಗಿದೆ ಎಂದಿದ್ದಾರೆ. * ಈ ಉಪಕ್ರಮದ ಅಡಿಯಲ್ಲಿ 18-40 ವರ್ಷ ವಯಸ್ಸಿನ ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಿಕೊಂಡವರು ವಯಸ್ಸಿನ ಆಧಾರದ ಮೇಲೆ ಈ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ ಕನಿಷ್ಠವು 660 ರೂ. ರಿಂದ 2400 ರೂ. ಹೆಸರಿನಲ್ಲಿ ಠೇವಣಿ ಇಡಲಾಗುತ್ತದೆ. ಅವರಿಗೆ 60 ವರ್ಷಗಳ ನಂತರ ಪ್ರತಿ ತಿಂಗಳಿಗೆ 3,000 ರೂ. ಪಿಂಚಣಿಯನ್ನು ಪಡೆದುಕೊಳ್ಳಲಿದ್ದಾರೆ.