Job Description: * ಇತ್ತೀಚಿಗೆ ರಷ್ಯಾ ಆಕ್ರಮಣದಿಂದ ಉಕ್ರೇನ್‍ ನಗರವು 140 ಕೋಟಿ ಡಾಲರ್ ತುರ್ತು ನೆರವು ನೀಡಲು IMF ಮಂಡಳಿ ನಿರ್ಧರಿಸಿದೆ. ಇದೀಗ ಉಕ್ರೇನ್‍ ರಾಷ್ಟ್ರಕ್ಕೆ 140 ಕೋಟಿ ಡಾಲರ್ ತುರ್ತು ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿ(IMF) ಕಾರ್ಯ ನಿರ್ವಾಹಕ ಮಂಡಳಿ ಒಪ್ಪಿಗೆಯನ್ನು ನೀಡಿದೆ ಎಂದು IMF ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವ ಅವರು ಹೇಳಿಕೆ ನೀಡಿದ್ದಾರೆ. * ಈ ಹಿಂದೆ ಡಿಸೆಂಬರ್ ನಲ್ಲಿ IMF ಉಕ್ರೇನ್‍ಗೆ 70 ಕೋಟಿ ಗೂ ಅಧಿಕ ಹಣದ ನೆರವು ನೀಡಿದೆ. ಪ್ರಸ್ತುತ ರಷ್ಯಾ ರಾಷ್ಟ್ರದ ಆಕ್ರಮಣದಿಂದಾಗಿ ಉಕ್ರೇನ್ ರಾಷ್ಟ್ರವು ತತ್ತರಿಸಿ ಹೋಗಿದೆ. ಸದ್ಯ ಯೂರೋಪ್ ದೇಶಗಳು ನೆರವು ನೀಡಲು ಸಮ್ಮತಿಯನ್ನು ಸೂಚಿಸಿವೆ. * ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF) ಇದೊಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿದೆ. ಇದು ಸುಮಾರು 190 ದೇಶಗಳನ್ನು ಒಳಗೊಂಡಿದೆ. ಇದು ತನ್ನ ಪ್ರಧಾನ ಕಛೇರಿಯನ್ನು ಅಮೇರಿಕದ ವಾಷಿಂಗ್ಟನ್, D.C. ನಲ್ಲಿದೆ. ಈ ಹಿಂದೆ 1944 ರಲ್ಲಿ ರೂಪುಗೊಂಡಿರುವ ಈ IMF 27 ಡಿಸೆಂಬರ್ 1945 ರಂದು ಆರಂಭವಾಗಿದೆ. ಇದು ದೇಶಗಳು ಕೋಟಾ ವ್ಯವಸ್ಥೆಯ ಮೂಲಕ ಪೂಲ್‌ಗೆ ಹಣವನ್ನು ಕೊಡುಗೆಯಾಗಿ ಒದಗಿಸುತ್ತದೆ, ಇದರಿಂದ ಪಾವತಿಗಳ ಸಮತೋಲನ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶಗಳು ಹಣವನ್ನು ಪಡೆಯಬಹುದಾಗಿದೆ. * IMF ನಿಧಿಗಳು ಎರಡು ಪ್ರಮುಖ ಮೂಲಗಳ ಮೂಲಕ ಬರುತ್ತವೆ, ಅವುಗಳು ಕೋಟಾಗಳು ಹಾಗೂ ಸಾಲಗಳ ರೂಪದಲ್ಲಿ ಬರುತ್ತವೆ. ಪ್ರಸ್ತುತ ಸದಸ್ಯರ ಕೋಟಾದ ಗಾತ್ರವು ಪ್ರಪಂಚದಲ್ಲಿ ಅದರ ಆರ್ಥಿಕ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ಅವಲಂಬಿಸಿರುತ್ತದೆ. ಹಾಗೆಯೇ ಹೆಚ್ಚಿನ ಆರ್ಥಿಕ ಪ್ರಾಮುಖ್ಯತೆಯನ್ನು ಪಡೆದು ಕೊಂಡಿರುವ ರಾಷ್ಟ್ರಗಳು ದೊಡ್ಡ ಕೋಟಾಗಳನ್ನು ಒಳಗೊಂಡಿರುತ್ತವೆ. * ಪ್ರಸ್ತುತ MD ಹಾಗೂ IMF ನ ಅಧ್ಯಕ್ಷ ಸ್ತಾನವನ್ನು ಬಲ್ಗೇರಿಯನ್ ಅರ್ಥಶಾಸ್ತ್ರಜ್ಞ ಕ್ರಿಸ್ಟಲಿನಾ ಜಾರ್ಜಿವಾ, ಅವರು ಈ ಹಿಂದೆ 2019 ರ ಅಕ್ಟೋಬರ್. 01 ರಿಂದ ವಹಿಸಿಕೊಂಡಿದ್ದಾರೆ. 2022 ರ ಜನವರಿ 21 ರಿಂದ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿರುವ ಗೀತಾ ಗೋಪಿನಾಥ್ ಅವರನ್ನು ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಮೊದಲು ಗೋಪಿನಾಥ್ ಅವರು ಭಾರತದ ಕೇರಳ ರಾಜ್ಯದ ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.