Job Description: * ಸೆಡಾನ್ ಪಾರ್ಕ್ ನಲ್ಲಿ ನಡೆದ ವಿಶ್ವ ಕಪ್ ಕ್ರಿಕೆಟಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು 39 ವರ್ಷದ ಜೂಲನ್ ಸರಿಗಟ್ಟಿದ್ದಾರೆ. * ಈ ಸಾಧನೆ ಮಾಡುವ ಮೂಲಕ ಆಸ್ಟ್ರೇಲಿಯಾದ ಲಿನ್ ಪುಲ್ಸ್ಟಿನ್ ಅವರ ದಾಖಲೆಯನ್ನು ಸಮಗಟ್ಟಿದರು. * ವಿಶ್ವ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದ 50 ನೇ ಓವರ್ ನಲ್ಲಿ ನ್ಯೂಜಿಲ್ಯಾಂಡ್ ತಂಡದ ಕೇಟಿ ಮಾರ್ಟಿನ್ ವಿಕೆಟ್ ಪಡೆಯುವ ಮೂಲಕ ಜೂಲನ್ ದಾಖಲೆ ಬರೆದರು. * ಜೂಲನ್ 2002 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 197 ಏಕದಿನ ಪಂದ್ಯಗಳನ್ನು ಆಡಿರುವ ಅವರು 248 ವಿಕೆಟ್ ಗಳನ್ನೂ ಗಳಿಸಿದ್ದಾರೆ. * ಜೂಲನ್ ಅವರು 12 ಟೆಸ್ಟ್ ಮತ್ತು 68 T20 ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 44 ಹಾಗೂ 56 ವಿಕೆಟ್ ಗಳು ಅವರ ಖಾತೆಯಲ್ಲಿವೆ. * ಇಂಗ್ಲೆಂಡ್ ನ ಮಾಜಿ ಸ್ಪಿನ್ನರ್ ಕೆರೊಲ್ ಆನ್ ಹಾಜಸ್ 24 ಪಂದ್ಯಗಳಿಂದ 37 ವಿಕೆಟ್ ಗಳಿಸಿದ್ದರು.