Job Description: * ಲೇಖಕಿ ಗೀತಾಂಜಲಿ ಶ್ರೀ ಹಿಂದಿಯಲ್ಲಿ ಬರೆದ ಪುಸ್ತಕ ಮೂಲ ಆಗಿರುವ 'ಟೂಮ್ ಆಫ್ ಸ್ಯಾಂಡ್' ಕಾದಂಬರಿಯು ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ವಿಶ್ವದ 13 ಪುಸ್ತಕಗಳಲ್ಲಿ ಒಂದಾಗಿದೆ. * 'ಟೂಮ್ ಆಫ್ ಸ್ಯಾಂಡ್' ಮೂಲ ಹಿಂದಿ ಕಾದಂಬರಿಯನ್ನು ಡೈಸಿ ರಾಕ್ ವೆಲ್ ಅವರು ಇಂಗ್ಲೀಷಗೆ ತರ್ಜುಮೆ ಮಾಡಿದ್ದರು. * 'ಟೂಮ್ ಆಫ್ ಸ್ಯಾಂಡ್' ಕೃತಿಯು ಮುಪ್ಪಾವಸ್ಥೆಯ ವೃದ್ದೆಯು ತನ್ನ ಪತಿಯನ್ನು ಸಂಧ್ಯಾಕಾಲದಲ್ಲಿ ಕಳೆದುಕೊಂಡಾಗ ಅವಳಿಗಾದ ಮನೋಖಿನ್ನತೆ ಅದರಿಂದ ಅವಳು ಹೊರಗೆ ಬರುವ ಸ್ಥಿತಿಯನ್ನು ಸೇರಿದಂತೆ ಕಥಾಹಂದರವನ್ನು ಹೊಂದಿದೆ. * 'ಟೂಮ್ ಆಫ್ ಸ್ಯಾಂಡ್' ಕೃತಿಯು ಇದೀಗ 50 ಲಕ್ಷ ರೂಪಾಯಿ ಮೌಲ್ಯದ ಪ್ರಶಸ್ತಿ ವಿಭಾಗದಲ್ಲಿ ಬುಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ. * ಉತ್ತರ ಪ್ರದೇಶದ ಮೈನ್ ಪುರಿಯವರಾದ ಲೇಖಕಿ ಗೀತಾಂಜಲಿ ಶ್ರೀಯವರು 3 ಕಾದಂಬರಿಗಳನ್ನು ಮತ್ತು ಹಲವು ಕಥೆಗಳನ್ನು ಬರೆದಿದ್ದಾರೆ. ಇದರಲ್ಲಿ ಹಲವು ಪುಸ್ತಕಗಳು ಇಂಗ್ಲಿಷ್ , ಫ್ರೆಂಚ್, ಜೆರ್ಮನಿ ಹಾಗೂ ಕೊರಿಯಾ ಭಾಷೆಗಳಿಗೆ ತರ್ಜುಮೆಗೊಂಡಿವೆ.