Job Description: * ಇತ್ತೀಚಿಗೆ ವಿಶ್ವ ಬ್ಯಾಂಕ್ ಉಕ್ರೇನ್‌ ರಾಷ್ಟ್ರಕ್ಕೆ USD 723 ಮಿಲಿಯನ್ ಸಾಲದ ರೂಪದಲ್ಲಿ ಅನುಮೋದಿಸಿದ್ದಾರೆ. ರಷ್ಯಾ ದೇಶದ ಜೊತೆಗೆ ಯುದ್ಧದ ನಡುವೆ ಉಕ್ರೇನ್‌ ಸರ್ಕಾರಕ್ಕೆ ಬಜೆಟ್ ಬೆಂಬಲವನ್ನು ನೀಡಿದೆ. * ಪ್ರಸ್ತುತ ಉಕ್ರೇನ್‌ನಲ್ಲಿನ ಆರ್ಥಿಕ ತುರ್ತುಸ್ಥಿತಿಯಿಂದ ಚೇತರಿಕೆ ಕಂಡುಕೊಳ್ಳಲು ಹಣಕಾಸು ಅಥವಾ ಉಚಿತ ಉಕ್ರೇನ್ - USD 489 ಮಿಲಿಯನ್‌ಗೆ ಅನುಮೋದನೆಯನ್ನು ನೀಡಿದೆ. ಇದೀಗ ಮಂಡಳಿಯು ಅನುಮೋದಿಸಿರುವ ಪ್ಯಾಕೇಜ್ USD 350 ಮಿಲಿಯನ್‌ಗೆ ಪೂರಕ ಸಾಲವನ್ನು ಹೊಂದಿದೆ. ಹಾಗೂ USD 139 ಮಿಲಿಯನ್ ಮೊತ್ತದಲ್ಲಿ ಖಾತರಿಯನ್ನು ಒದಗಿಸುತ್ತದೆ. ಹಾಗೂ USD 134 ಮಿಲಿಯನ್‌ನ ಅನುದಾನ ಹಣಕಾಸು ಹಾಗೂ USD 100 ಮಿಲಿಯನ್‌ನ ಸಮಾನಾಂತರ ಹಣಕಾಸುನ್ನು ಕಲ್ಪಿಸುತ್ತದೆ. ಈ ಹಿನ್ನಲೆಯಿಂದಾಗಿ ಪರಿಣಾಮವಾಗಿ USD 723 ಮಿಲಿಯನ್ ಒಟ್ಟು ಹಣಕಾಸು ಬೆಂಬಲವನ್ನು ಕಲ್ಪಿಸಲಿದೆ ಎಂದಿದ್ದಾರೆ. * ಸದ್ಯ ಉಕ್ರೇನಿನ ಆಸ್ಪತ್ರೆಯ ಕೆಲಸಗಾರರಿಗೆ ವೇತನ, ವೃದ್ಧರಿಗೆ ಪಿಂಚಣಿ ಹಾಗೂ ದುರ್ಬಲರಿಗೆ ಸಾಮಾಜಿಕ ಕಾರ್ಯಕ್ರಮಗಳು ಸೇರಿದಂತೆ ಉಕ್ರೇನಿಯನ್ ಜನರಿಗೆ ನಿರ್ಣಾಯಕ ಸೇವೆಗಳನ್ನು ಕಲ್ಪಿಸಲು ಸರ್ಕಾರಕ್ಕೆ ಸಹಾಯ ಮಾಡಲಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. ವಿಶ್ವ ಬ್ಯಾಂಕ್ ನೆದರ್‌ಲ್ಯಾಂಡ್‌ನಿಂದ 80 ಮಿಲಿಯನ್ ಯುರೋ ಹಾಗೂ ಸ್ವೀಡನ್ USD 50 ಮಿಲಿಯನ್‌ಗೆ ಆರಂಭಿಕ ಬೆಂಬಲವನ್ನು ಹೆಚ್ಚಿಸಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. * ಯುಕೆ, ಡೆನ್ಮಾರ್ಕ್, ಲಾಟ್ವಿಯಾ, ಲಿಥುವೇನಿಯಾ ಹಾಗೂ ಐಸ್‌ಲ್ಯಾಂಡ್‌ ರಾಷ್ಟ್ರಗಳಿಂದ ಇಲ್ಲಿಯವರೆಗೆ USD 134 ಮಿಲಿಯನ್‌ನ ಕೊಡುಗೆ ರೂಪದಲ್ಲಿ ಉಕ್ರೇನ್‌ಗೆ ಅನುದಾನ ಸಂಪನ್ಮೂಲಗಳನ್ನು ಅನುಕೂಲವಾಗುವಂತೆ ವಿಶ್ವ ಬ್ಯಾಂಕ್ ಬಹು-ದಾನಿ ಟ್ರಸ್ಟ್ ನಿಧಿಯನ್ನು ಸ್ಥಾಪನೆ ಮಾಡಿದೆ. ಇದೀಗ ವಿಶ್ವ ಬ್ಯಾಂಕ್ MDTF ಗೆ ಹೆಚ್ಚಿನ ಅನುದಾನ ಕೊಡುಗೆಗಳಿಗಾಗಿ ಕರೆಯನ್ನು ನೀಡುತ್ತಿದೆ. ಈ ಹಿನ್ನಲೆಯಿಂದಾಗಿ ಜಪಾನ್ ರಾಷ್ಟ್ರವು ಸುಮಾರು USD 100 ಮಿಲಿಯನ್'ನ್ನು ಹಣಕಾಸು ಬೆಂಬಲ ಪ್ಯಾಕೇಜ್‌ಗೆ ನೀಡಿ ಸಹಾಯಸ್ತವನ್ನು ತೋರಿದೆ. * ವಿಶ್ವ ಬ್ಯಾಂಕ್ ಒಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿದೆ. ವಿಶ್ವಬ್ಯಾಂಕ್ ಎಂಬುದು ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ (IBRD) ಮತ್ತು ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್ (IDA) ಗಳ ಸಾಮೂಹಿಕ ಹೆಸರುನ್ನು ಒಳಗೊಂಡಿದೆ, ಇದನ್ನು 1944 ರ ಬ್ರೆಟನ್ ವುಡ್ಸ್ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಸ್ಥಾಪನೆ ಮಾಡಲಾಗಿದೆ. * ಪ್ರಸ್ತುತ ವಿಶ್ವ ಬ್ಯಾಂಕ್ ನ್ನು ಅಧ್ಯಕ್ಷರು ಹಾಗೂ 25 ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು 29 ವಿವಿಧ ಉಪಾಧ್ಯಕ್ಷರು ನಡೆಸುತ್ತಾರೆ. IBRD ಮತ್ತು IDA ಕ್ರಮವಾಗಿ 189 ಹಾಗೂ 174 ಸದಸ್ಯ ರಾಷ್ಟ್ರಗಳನ್ನು ಹೊಂದಿವೆ.