Job Description: * ಇತ್ತೀಚಿಗೆ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು 'ಕೌಶಲ್ಯ ಮಾತೃತ್ವ ಯೋಜನೆ'ಯನ್ನು ಆರಂಭಿಸಿದ್ದಾರೆ. ಇದೇ ಕಾರ್ಯಕ್ರಮದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸುರಕ್ಷಿತ ತಾಯ್ತನಕ್ಕಾಗಿ '5' ಮಹಿಳಾ ಫಲಾನುಭವಿಗಳಿಗೆ ತಲಾ 5 ಸಾವಿರ ರೂ.ಗಳ ಚೆಕ್‌ ನ್ನು ವಿತರಣೆ ಮಾಡಿದ್ದಾರೆ. * ಈ 'ಕೌಶಲ್ಯ ಮಾತೃತ್ವ ಯೋಜನೆ ಅಡಿಯಲ್ಲಿ 2 ನೇ ಹೆಣ್ಣು ಮಗುವಿನ ಜನನದ ಸಂದರ್ಭದಲ್ಲಿ ಮಹಿಳೆಯರಿಗೆ 5000 ರೂ. ಆರ್ಥಿಕ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೂ ‘ಕನ್ಯಾ ವಿವಾಹ ಯೋಜನೆ’ ಕಾಫಿ ಟೇಬಲ್ ಪುಸ್ತಕ, ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿರುವ ಯೋಜನೆಗಳ ಕರಪತ್ರಗಳು ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ ಟೆಲಿಫೋನ್ ಡೈರೆಕ್ಟರಿಗಳನ್ನೂ ಬಿಡುಗಡೆ ಮಾಡಿದ್ದಾರೆ. * ಈ ಯೋಜನೆಯನ್ನು ಆರ್ಥಿಕ ಪಾಲ್ಗೊಳ್ಳುವಿಕೆಯಲ್ಲಿ ಹಿಂದುಳಿದಿರುವ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಆರಂಭಿಸಲಾಗಿದೆ. ‘ಮಹಿಳಾ ಮಾದಾಯಿ’ ರೀತಿಯಲ್ಲಿನ ಉಪಕ್ರಮಗಳನ್ನು ರಾಜ್ಯ ಸರ್ಕಾರವು ಈ ಮೊದಲೇ ಆರಂಭಿಸಿದೆ, ಇದರಿಂದಾಗಿ ರಾಜ್ಯದಲ್ಲಿನ ಮಹಿಳೆಯರಿಗೆ ಗೌತನ್‌ಗಳಲ್ಲಿ ಅನೇಕ ವಸ್ತುಗಳನ್ನು ತಯಾರಿಸಲು ಅನುಕೂಲ ಮಾಡಿದೆ. * ಪ್ರಸ್ತುತ ಛತ್ತೀಸ್‌ಗಢದಲ್ಲಿನ ಮಹಿಳೆಯರು ವಿದ್ಯುತ್ ಉತ್ಪಾದಿಸುತ್ತಾರೆ ಹಾಗೂ ಹಸುವಿನ ಸಗಣಿಯಿಂದ ಬಣ್ಣವನ್ನು ತಯಾರಿಸುತ್ತಾರೆ. ಇದರಿಂದಾಗಿ ಮಹಿಳೆಯರ ಆದಾಯವನ್ನು ಹೆಚ್ಚಾಗಲಿದೆ. ರಾಜ್ಯವು ಗೌತನ್‌ಗಳನ್ನು ಗ್ರಾಮೀಣ ಕೈಗಾರಿಕಾ ಪಾರ್ಕ್‌ಗಳಾಗಿ ಅಭಿವೃದ್ಧಿಪಡಿಸಿದೆ. * ಛತ್ತೀಸ್‌ಗಢ ಸರ್ಕಾರವು 'ನವ ಬಿಹಾನ್ ಯೋಜನೆ' ಹಾಗೂ 'ಸಖಿ ಒನ್ ಸ್ಟಾಪ್ ಸೆಂಟರ್' ಅಡಿಯಲ್ಲಿ ಮಹಿಳಾ ರಕ್ಷಣೆಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಸನ್ಮಾನಿಸಿದರು.