Job Description: * ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶವು ಘೇಂಡಾಮೃಗಗಳು ಹಾಗೂ ಹುಲಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಗೆ ಸಾಕ್ಷಿಯಾಗಿದೆ. * ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಈ ಹಿಂದೆ 2021 ರ ಜನಗಣತಿಯ ಪ್ರಕಾರ ಹುಲಿಗಳ ಸಂಖ್ಯೆ 48 ರಿಂದ 60 ಕ್ಕಿಂತ ಹೆಚ್ಚಾಗಬಹುದು ಎಂದು ಅಂದಾಜಿಸಿದ್ದರು. ಈ ಹಿಂದೆ 2010 ರಲ್ಲಿ ಇದೇ ಉದ್ಯಾನವನದಲ್ಲಿನ ಹುಲಿ ಜನಸಂಖ್ಯೆಯು 10 ದಾಖಲಾಗಿತ್ತು, ಮತ್ತೆ 2020 ರಲ್ಲಿ ಆ ಸಂಖ್ಯೆಯು 30 ಕ್ಕೆ ಏರಿಕೆಯಾಗಿದೆ. * ಅಸ್ಸಾಂ'ನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ 2010 ರಲ್ಲಿ ಮೊದಲ ಹುಲಿ ಗಣತಿ ನಡೆಸಿದ ಬಳಿಕ ಹುಲಿ ಸಂರಕ್ಷಣಾ ಪ್ರಾಧಿಕಾರವು ನೀಡಿರುವ ಮಾಹಿತಿಯ ಪ್ರಕಾರ ರಾಷ್ಟ್ರೀಯ ಉದ್ಯಾನವನದ ಹುಲಿಗಳ ಸಂಖ್ಯೆಯ 2020 ರಲ್ಲಿ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದರು. * 2021 ರ ಜನಗಣತಿಯಲ್ಲಿ, ಈ ಉದ್ಯಾನವನದಲ್ಲಿ 48 ಹುಲಿಗಳನ್ನು ಎಣಿಕೆ ಮಾಡಲಾಗಿತ್ತು, ಆದರೆ ಇದೀಗ ಒಂದೇ ವರ್ಷದಲ್ಲಿ ಹುಲಿಗಳ ಸಂಖ್ಯೆಯು 18 ರಷ್ಟು ಏರಿಕೆ ಕಂಡಿದೆ. ಇದೀಗ 2022 ರಲ್ಲಿ ಜನಗಣತಿ ನಡೆಯುತ್ತಿದೆ ಹಾಗೂ ಇದು ಮಾರ್ಚ್ ತಿಂಗಳಿನ ವೇಳೆಗೆ ಪೂರ್ಣವಾಗಲಿದೆ, ಅಷ್ಟೇ ಅಲ್ಲದೇ ಜನಸಂಖ್ಯೆಯು 60 ಕ್ಕಿಂತ ಹೆಚ್ಚಾಗಲಿದೆ ಎಂದು ಅಂದಾಜಿಸಿದ್ದಾರೆ. * ಇದೇ ಉದ್ಯಾನವನದ ರೈನೋ (ಖಡ್ಗಮೃಗ ಜನಸಂಖ್ಯೆ) ಜನಸಂಖ್ಯೆಯೂ ಹೆಚ್ಚಾಗಿದೆ. ಇಂಡಿಯನ್ ರೈನೋ ವಿಷನ್ 2020 ಅಡಿಯಲ್ಲಿ, ಅಸ್ಸಾಂ ಸರ್ಕಾರವು 2005 ರಲ್ಲಿ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗಗಳನ್ನು ಮರುಪರಿಚಯಿಸಲು ನಿರ್ಧಾರವನ್ನು ಕೈಗೊಂಡಿತ್ತು ಹಾಗೂ ಮೊದಲ ಘೇಂಡಾಮೃಗವನ್ನು 2006 ರಲ್ಲಿ ಕಾಜಿರಂಗ ಬಳಿಯ ವನ್ಯಜೀವಿ ಪುನರ್ವಸತಿ ಹಾಗೂ ಸಂರಕ್ಷಣಾ ಕೇಂದ್ರದಿಂದ ಅವುಗಳನ್ನು ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. * ಮನಸ್ ರಾಷ್ಟ್ರೀಯ ಉದ್ಯಾನವನವು ಯುನೆಸ್ಕೋ ನೈಸರ್ಗಿಕ ವಿಶ್ವ ಪರಂಪರೆಯ ತಾಣ, ಆನೆ ಮೀಸಲು, ಪ್ರಾಜೆಕ್ಟ್ ಟೈಗರ್ ರಿಸರ್ವ್ ಮತ್ತು ಜೀವಗೋಳ ಮೀಸಲು ಸ್ಥಾನಮಾನವನ್ನು ಪಡೆದುಕೊಂಡಿರುವ ರಾಷ್ಟ್ರೀಯ ಉದ್ಯಾನವನವಾಗಿದೆ. ಈ ಉದ್ಯಾನವನವು ಅಸ್ಸಾಂನ ಹಿಮಾಲಯದ ತಪ್ಪಲಿನ ಪ್ರದೇಶದಲ್ಲಿದೆ, ಹಾಗೂ ಭೂತಾನ್‌ನ ರಾಯಲ್ ಮಾನಸ್ ರಾಷ್ಟ್ರೀಯ ಉದ್ಯಾನವನಕ್ಕೆ ತನ್ನ ಗಡಿಯನ್ನು ಹೊಂದಿಕೊಂಡಿದೆ. ಸದ್ಯ ಈ ಉದ್ಯಾನವನವು ಅಳಿವಿನಂಚಿನಲ್ಲಿರುವ ಹಾಗೂ ಅಪರೂಪದ ಸ್ಥಳೀಯ ವನ್ಯಜೀವಿಗಳಾಗಿರುವ ಹಿಸ್ಪಿಡ್ ಮೊಲ, ಅಸ್ಸಾಂ ಛಾವಣಿಯ ಆಮೆ, ಪಿಗ್ಮಿ ಹಾಗ್ ಹಾಗೂ ಗೋಲ್ಡನ್ ಲಾಂಗೂರ್ಗಳಿಗೆ ಹೆಸರುವಾಸಿಯಾಗಿದೆ. * ಅಸ್ಸಾಂನ ಈ ರಾಷ್ಟ್ರೀಯ ಉದ್ಯಾನವನವು ಹೆಚ್ಚಿನ ಜನಸಂಖ್ಯೆಯಲ್ಲಿ ಕಾಡು ನೀರಿನ ಎಮ್ಮೆಗಳನ್ನು ಹೊಂದಿದೆ.