Job Description: * ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನ ಸಂವಿಧಾನ ಪೀಠವು ಮಹತ್ವದ ಮತ್ತು ದೂರಗಾಮಿ ಪರಿಣಾಮ ಬೀರುವಂತಹ ತೀರ್ಪನ್ನು ಮಾರ್ಚ್ 2 ರ ಗುರುವಾರ ದಿನದಂದು ನೀಡಿದೆ. * ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ (ಅಥವಾ ಅತಿ ದೊಡ್ಡ ಯ ಪಕ್ಷದ ನಾಯಕ) ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯು ಸದಸ್ಯರಾಗಿರುವ ಸಮಿತಿಯ ಸಲಹೆ ಮೇರೆಗೆ ರಾಷ್ಟ್ರಪತಿಯು ಮುಖ್ಯ ಚುನಾವಣಾ ಆಯುಕ್ತ (ಸಿ.ಐ.ಸಿ) ಮತ್ತು ಚುನಾವಣಾ ಆಯುಕ್ತರನ್ನು (ಇ.ಸಿ) ನೇಮಿಸಬೇಕು ಎಂದು ತೀರ್ಪು ನೀಡಿದೆ.