Job Description: * ಸೇಫ್ ಸಿಟಿ ಬೆಂಗಳೂರು ಕಾರ್ಯಕ್ರಮದ ಮೊದಲನೇ ಹಂತವು 3 ಮಾರ್ಚ್ 2023 ರಂದು ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಸಮ್ಮುಖದಲ್ಲಿ ಸನ್ಮಾನ್ಯ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ರವರಿಂದ ಲೋಕಾರ್ಪಣೆಗೊಳ್ಳಲಿದೆ. * ಮಹತ್ತರ ಯೋಜನೆಗಳಲ್ಲಿ ಬಹು ಮುಖ್ಯವಾಗಿ ಮಹಿಳಾ ಸುರಕ್ಷತೆಗಾಗಿ 632 ಕೋಟಿ ರೂ ಗಳಿಂದ ವಿವಿಧ ಯೋಜನೆ * ಸೇಫ್ ಸಿಟಿ ಬೆಂಗಳೂರು ಯೋಜನೆಯ ವಿವಿಧ ಮುಖ್ಯ ಅಂಶಗಳು - 3000 ಪ್ರಮುಖ ಸ್ಥಳಗಳು, 50 ಸುರಕ್ಷಾ ದ್ವೀಪಗಳು, 6300 ಕ್ಯಾಮೆರಾಗಳು - ಸಂಚಾರಿ ನ್ಯಾಯ ವಿಜ್ಞಾನ ಪ್ರಯೋಗಾಲಯ, ಸಲಹಾ ಕೇಂದ್ರಗಳು, ರಾಣಿ ಚೆನ್ನಮ್ಮ ಪಡೆ - 800 ಪಿಟಿಜೆಟ್ (ಪ್ಯಾನ್ ಟಿಲ್ಟ್ ಜೂಮ್) ಕ್ಯಾಮೆರಾಗಳು, 400 ಹೈ- ರೆಸಲ್ಯೂಷನ್ ಕ್ಯಾಮೆರಾಗಳು, 560 ಬಾಡಿವೋರ್ನ್ ಕ್ಯಾಮೆರಾಗಳು - ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ವಾಹನ, ಡಯಲ್ 112 (ತುರ್ತು ಸಹಾಯವಾಣಿ ಸಮೀಕರಣ) ಕಮಾಂಡ್ ಸೆಂಟರ್, ಠಾಣೆಗಳಿಗೆ ನೇರ ವಿಡಿಯೋ ಪ್ರಸಾರ