* ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಿ, ಮತ್ತೆ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ಅಗತ್ಯವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರದರ್ಶಿಸಲು ಮೂನ್ ಮಿಷನ್ "ಚಂದ್ರಯಾನ-4"ಗೆ ಕೇಂದ್ರ ಸಚಿವ ಸಂಪುಟ ಬುಧವಾರ (ಸೆಪ್ಟೆಂಬರ್ 18) ಅನುಮೋದನೆ ನೀಡಿದೆ.* ಚಂದ್ರಯಾನ-4 ಮಿಷನ್ ಚಂದ್ರನ ಮೇಲ್ಮೈಯಿಂದ ಕಲ್ಲುಗಳು ಮತ್ತು ಮಣ್ಣನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ ಮತ್ತು ಭೂಮಿಗೆ ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸುತ್ತದೆ.* "ಡಾಕಿಂಗ್ / ಅನ್‌ಡಾಕಿಂಗ್, ಲ್ಯಾಂಡಿಂಗ್ ಸೇರಿದಂತೆ ಭೂಮಿಗೆ ಸುರಕ್ಷಿತವಾಗಿ ಮರಳಲು ಮತ್ತು ಚಂದ್ರನ ಮಾದರಿ ಸಂಗ್ರಹಣೆ ಮತ್ತು ವಿಶ್ಲೇಷಣೆಯನ್ನು ಸಾಧಿಸಲು ಅಗತ್ಯವಿರುವ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುವುದು" ಎಂದು ಅದು ಹೇಳಿದೆ.* ಆಗಸ್ಟ್ 20 ರಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ಚಂದ್ರಯಾನ 4 ಮತ್ತು 5 ರ ಮುಂದಿನ ಸುತ್ತಿನ ಚಂದ್ರಯಾನಗಳ ವಿನ್ಯಾಸವನ್ನು ಬಾಹ್ಯಾಕಾಶ ಸಂಸ್ಥೆ ಪೂರ್ಣಗೊಳಿಸಿದೆ ಮತ್ತು ಅದಕ್ಕಾಗಿ ಸರ್ಕಾರದ ಅನುಮೋದನೆಯನ್ನು ಪಡೆಯುವ ಪ್ರಕ್ರಿಯೆಯಲ್ಲಿದೆ. ಎಂದು ತಿಳಿಸಿದ್ದರು.* ತಂತ್ರಜ್ಞಾನ ಪ್ರದರ್ಶನ ಮಿಷನ್ "ಚಂದ್ರಯಾನ-4" ಗೆ ಒಟ್ಟು 2,104.06 ಕೋಟಿ ರೂಪಾಯಿ ಅವಶ್ಯಕತೆ ಎಂದು ಪ್ರಕಟಣೆ ತಿಳಿಸಿದೆ.