Job Description: * ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಸೆ.17)ಒಡಿಶಾ ಸರ್ಕಾರದ ಪ್ರಮುಖ ಮಹಿಳಾ ಕೇಂದ್ರಿತ ಕಾರ್ಯಕ್ರಮ ಸುಭದ್ರಾ ಯೋಜನೆಗೆ ಚಾಲನೆ ನೀಡಿದರು. ಇದು ಒಡಿಶಾ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಪ್ರತಿ ವರ್ಷ 21 ರಿಂದ 60 ವರ್ಷ ವಯಸ್ಸಿನ ಅರ್ಹ ಮಹಿಳಾ ಫಲಾನುಭವಿಗಳ ರಾಜ್ಯ ಖಾತೆಗೆ 10,000 ರೂ. ಕೊಡಲಾಗುತ್ತದೆ.* ಒಡಿಶಾ ರಾಜ್ಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಲಾಗಿದೆ. ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಿತ್ತು. ಈ ಯೋಜನೆಯಡಿ ರಾಜ್ಯ ಸರ್ಕಾರವು ಮಹಿಳೆಯರಿಗೆ ಎರಡು ಕಂತುಗಳಲ್ಲಿ ವರ್ಷಕ್ಕೆ ಒಟ್ಟು ಹತ್ತು ಸಾವಿರ ರೂ. ನೀಡುತ್ತದೆ.* ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರು ಮಾತ್ರ ಸುಭದ್ರಾ ಯೋಜನೆಯ ಲಾಭ ಪಡೆಯುತ್ತಾರೆ. ಸರ್ಕಾರಿ ಉದ್ಯೋಗ ಮಾಡುವ ಮತ್ತು ಆದಾಯ ತೆರಿಗೆ ಪಾವತಿಸುವ ಮಹಿಳೆಯರು ಈ ಯೋಜನೆಗೆ ಒಳಪಡುವುದಿಲ್ಲ. ಮಹಿಳೆಯು ಯಾವುದೇ ಇತರ ಸರ್ಕಾರಿ ಯೋಜನೆಗಳಿಂದ ಪ್ರತಿ ವರ್ಷ ರೂ 15,000 ಅಥವಾ ಅದಕ್ಕಿಂತ ಹೆಚ್ಚಿನ ಲಾಭವನ್ನು ಪಡೆದರೆ, ಆಕೆಯನ್ನು ಈ ಯೋಜನೆಗೆ ಅನ್ವಯವಾಗುವುದಿಲ್ಲ.* ಸುಭದ್ರ ಯೋಜನೆಯ ಲಾಭ ಪಡೆಯಲು ಅಂಗನವಾಡಿ ಕೇಂದ್ರಗಳು, ಬ್ಲಾಕ್ ಕಚೇರಿ ಮತ್ತು ಸಾರ್ವಜನಿಕ ಸೇವಾ ಕೇಂದ್ರಗಳಿಂದ ಮಹಿಳೆಯರು ಉಚಿತವಾಗಿ ಫಾರ್ಮ್ ಪಡೆಯಬಹುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಯೋಜನೆಯ ಮೇಲ್ವಿಚಾರಣೆಗಾಗಿ ಸುಭದ್ರಾ ಸೊಸೈಟಿ ರಚಿಸಲಾಗುವುದು.