* ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಭಾರತ 2023-24ರಲ್ಲಿ ಶೇ.42ರಷ್ಟು ಪಾಲು ಹೊಂದಿದ್ದು, 2028 ಕೋಟಿ ರೂ ಮೌಲ್ಯದ ರೇಷ್ಮೆ ರಪ್ತು ಮಾಡಲಾಗಿದೆ. ಈ ಮೂಲಕ ಪ್ರಪಂಚದಲ್ಲಿಯೇ ಪ್ರಸ್ತುತ ರೇಷ್ಮೆ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. 2074ರ ವೇಳೆಗೆ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ ಶಿವಕುಮಾರ್ ತಿಳಿಸಿದರು..* ರೇಷ್ಮೆ ಉತ್ಪಾದನೆಯಲ್ಲಿ ಚೀನಾದ ನಂತರ ಭಾರತ ಎರಡನೇ ಸ್ಥಾನದಲ್ಲಿದೆ. ಸುಮಾರು 97% ರಷ್ಟು ಕಚ್ಚಾ ರೇಷ್ಮೆಯು ಐದು ಭಾರತೀಯ ರಾಜ್ಯಗಳಿಂದ ಬರುತ್ತದೆ, ಅವುಗಳೆಂದರೆ, ಆಂಧ್ರ ಪ್ರದೇಶ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಮತ್ತು ಕರ್ನಾಟಕವು ಪ್ರಮುಖ ಉತ್ಪಾದಕವಾಗಿದೆ.* ಪ್ರಸಕ್ತ ವರ್ಷ 2.63 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯಲಾಗುತ್ತಿದ್ದು, ಕಚ್ಚಾ ರೇಷ್ಮೆ ಪ್ರಮಾಣವೂ ಏರಿಕೆಯಾಗಿದೆ. 1948ರಲ್ಲಿ ಆರಂಭವಾದ ಕೇಂದ್ರ ರೇಷ್ಮೆ ಮಂಡಳಿಯಡಿ ದೇಶಾದ್ಯಂತ 159 ಘಟಕಗಳಿದ್ದು, 9 ಸಂಶೋಧನಾ ಸಂಸ್ಥೆಗಳು ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಉತ್ಪಾದನೆಯಾಗುತ್ತಿದೆ ಎಂದರು.