* ಚಂದ್ರನ ಮೇಲಿನ ಅಂಗಳದಲ್ಲಿನ ಕಲ್ಲು ಮತ್ತು ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ತರುವ ತನ್ನ ಬಾಹ್ಯಾಕಾಶ ನೌಕೆಯು ಭೂಮಿಯತ್ತ ಪ್ರಯಾಣ ಬೆಳೆಸಲುಆರಂಭಿಸಿದೆ ಎಂದು ಜೂನ್ 04 (ಮಂಗಳವಾರ) ರಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್ಎಸ್ಎ) ತಿಳಿಸಿದೆ.* ಈ ಮಿಷನ್ ಚಾಂಗ್'ಇ-6 ಚಂದ್ರನ ಪರಿಶೋಧನಾ ಕಾರ್ಯಕ್ರಮದ ಭಾಗವಾಗಿದೆ, ಇದನ್ನು ಚೀನಾದ ಚಂದ್ರನ ದೇವತೆಯ ಹೆಸರಿಡಲಾಗಿದೆ. ಇದು ಕಾರ್ಯಕ್ರಮದಲ್ಲಿ ಆರನೇ ಮಿಷನ್ ಆಗಿದೆ.* ಕಳೆದ ತಿಂಗಳು ಉಡಾವಣೆ ಮಾಡಿದ ಚೇಂಜ್ ಇ-6 ಎಂಬ ಹೆಸರಿನ ಬಾಹ್ಯಾಕಾಶ ನೌಕೆಯು ಇತ್ತೀಚೆಗೆ ಅಷ್ಟೇ ಚಂದ್ರನ ಮೇಲೈನಿಂದ ಕೆಳಗೆ ಇಳಿದಿದೆ ಎಂದು ಚಂದ್ರನ ಮೇಲೆ ಸಂಗ್ರಹಿಸಿರುವ ಮಣ್ಣು ಮತ್ತು ಕಲ್ಲಿನ ಮಾದರಿಯ ನೌಕೆಯ ಪೆಟ್ಟಿಗೆಯಯಲ್ಲಿಇಟ್ಟುಕೊಂಡಿದೆ. * ಜೂನ್ 25ರಂದು ಚೀನಾದ ಇನ್ನರ್ ಮಂಗೋಲಿಯಾ ಪ್ರಾಂತ್ಯದ ಮರುಭೂಮಿಯಲ್ಲಿ ಕೆಳಗೆ ಬಂದಿಳಿಯಲಿದೆ ಎಂದು ಚೀನಾ ದೇಶ ತಿಳಿಸಿದೆ.* 2020 ರಲ್ಲಿ ಚಾಂಗ್'ಇ-5 ಎಂಬ ಹೆಸರಿನ ಬಾಹ್ಯಾಕಾಶ ನೌಕೆಯು ಚಂದ್ರನ ಸಮೀಪದಿಂದ ಮಾದರಿಗಳನ್ನು ಸಂಗ್ರಹಿಸಿತು.* 2019 ರಲ್ಲಿ ಅದರ Chang'e-4 ಮಿಷನ್ ಈ ಪ್ರದೇಶದಲ್ಲಿ ಇಳಿಯಿತು ಮತ್ತು ರೋವರ್ ಸಹಾಯದಿಂದ ಚಂದ್ರನ ವಾನ್ ಕರ್ಮನ್ ಕುಳಿಯನ್ನು ಅನ್ವೇಷಿಸಿತು.