Job Description: * ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭಾರತದೊಂದಿಗಿನ ಗಡಿ ಪ್ರದೇಶದ ಯೋಧರೊಂದಿಗೆ ಸಂವಾದ ನಡೆಸಿ ಸಮರಕ್ಕೆ ಸಜ್ಜಾಗಿರಿ ಎಂದು ಸೂಚಿಸಿರುವ ಬೆನ್ನಲ್ಲೇ ಈಶಾನ್ಯ ಭಾಗದ ವಾಸ್ತವ ಗಡಿ ನಿಯಂತ್ರಣ ರೇಖೆ ಸಮೀಪ ಸಮರಾಭ್ಯಾಸ ನಡೆಸಲು ಭಾರತವೂ ಸಜ್ಜಾಗಿದೆ. ಈ ಗಡಿಯೊಂದಿಗಿನ ಎಲ್ಲ ಪ್ರಮುಖ ವಾಯು ನೆಲೆಗಳಲ್ಲಿ ಈ ಕಾರ್ಯಾಚರಣೆ ನಡೆಯಲಿದೆ. * ಸಮರಾಭ್ಯಾಸದಲ್ಲಿ ರಫೇಲ್ ಹಾಗೂ ಸುಖೋಯ್‌ ಯುದ್ಧ ವಿಮಾನಗಳು ಪಾಲ್ಗೊಳ್ಳಲಿವೆ. ಚೀನಾದ ವಾಯುಸೇನೆ ಗಡಿ ಪ್ರದೇಶಕ್ಕೆ ತುಂಬಾ ಹತ್ತಿರದಲ್ಲಿ ಹಾರಾಟ ನಡೆಸಿದಾಗ ತ್ವರಿತವಾಗಿ ಸ್ಪಂದಿಸಲು ಪೂರ್ವ ಕಮಾಂಡ್ ಸಂಪೂರ್ಣ ಸಜ್ಜಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.