Job Description: * ಗಣರಾಜ್ಯೋತ್ಸವದ ದಿನದಂದು ಕರ್ತವ್ಯಪಥದಲ್ಲಿ ನಡೆಯಲಿರುವ ಸೇನಾಪಡೆಗಳ ಆಕರ್ಷಕ ಪಥ ಸಂಚಲನದಲ್ಲಿ ಭಾರತೀಯ ನೌಕಾದಳದ ತಂಡವನ್ನು ಮಂಗಳೂರು ಮೂಲದ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್‌ ಮುನ್ನಡೆಸಲಿದ್ದಾರೆ. ರಾಜಪದ ಕರ್ತವ್ಯಪಥವಾಗಿ ಬದಲಾದ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಇದಾಗಿದೆ.* ಅಂಡಮಾನ್ ನಿಕೋಬಾರ್ ಕಮಾಂಡ್‌ನಲ್ಲಿ ನಿಯೋಜನೆ ಗೊಂಡಿರುವ ನೌಕಾ ವಾಯು ಕಾರ್ಯಾಚರಣಿಯ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ (29) ಒಟ್ಟು 144 ಸದಸ್ಯರ ಯುವ ನಾವಿಕರ ತಂಡವನ್ನು ಮುನ್ನಡೆಸಲಿದ್ದಾರೆ. ಇದರಲ್ಲಿ ಮೂವರು ಮಹಿಳೆಯರು ಮತ್ತು ಐವರು ಪುರುಷರು ಅಗ್ನಿವೀರರಾಗಿ ತರಬೇತಿ ಪಡೆಯುತ್ತಿದ್ದಾರೆ. ಮತ್ತೊಬ್ಬ ಮಹಿಳಾ ಅಧಿಕಾರಿ ಸಬ್ -ಲೆಫ್ಟಿನೆಂಟ್' ಎಸ್. ನಲ್ಲಿ ಮೀನಾ ಮೂರು ದಳದ ಕಮಾಂಡರ್‌ಗಳಲ್ಲಿ ಒಬ್ಬರಾಗಿರುತ್ತಾರೆ.