* ವಿಮಾನ ಉತ್ಪಾದನೆ ವಲಯದ ದೈತ್ಯ ಕಂಪೆನಿಯಾಗಿರುವ ಅಮೆರಿಕ ಮೂಲದ ಬೋಯಿಂಗ್ ಆ ದೇಶದ ಹೊರಗೆ ನಿರ್ಮಿಸಿದ ಅತೀ ದೊಡ್ಡ ಕೇಂದ್ರವಾದ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) ಮತ್ತು ಭಾರತೀಯ ಮಹಿಳೆಯರನ್ನು ವಿಮಾನಯಾನ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳಲು ಉತ್ತೇಜಿಸುವ ಬೋಯಿಂಗ್ ಸುಕನ್ಯಾ ಯೋಜನೆಗೆ ಪ್ರಧಾನಿ ಮೋದಿ ಶುಕ್ರವಾರ (ಜನವರಿ 19) ಚಾಲನೆ ನೀಡಿದರು.* ಕ್ಯಾಂಪಸ್‌ನ ಉದ್ಘಾಟನೆ ಸಮಾರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬೋಯಿಂಗ್ ಕಂಪನಿಯ ಸಿಒಒ ಸ್ಟೆಫೇನ್ ಪೋಪ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. * ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ದಲ್ಲಿರುವ ಏರೋಸ್ಪೇಸ್ ಪಾರ್ಕ್‌ನಲ್ಲಿ ಬೋಯಿಂಗ್‌ನ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ನಿರ್ಮಾಣಗೊಂಡಿದೆ.* ಕ್ಯಾಂಪಸ್ ವೈಶಿಷ್ಟ್ಯ : - ಈ ಕೇಂದ್ರವು ಜಾಗತಿಕ ಮಟ್ಟದ ವೈಮಾನಿಕ ಎಂಜಿನಿಯರಿಂಗ್ ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾಗಿ ಮತ್ತು ಅತಿ ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸಲಿದೆ. ಭವಿಷ್ಯದ ಏವಿಯಾನಿಕ್ ತಂತ್ರಜ್ಞಾನದ ಅಭಿವೃದ್ಧಿ, ಉತ್ಪಾದನೆ ಹಾಗೂ ಜೋಡಣೆ ಕಾರ್ಯವೂ ಇಲ್ಲಿ ನಡೆಯಲಿದೆ.- ಬೋಯಿಂಗ್ ಇಂಡಿಯಾ ಕ್ಯಾಂಪಸ್ 43 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಇದಕ್ಕಾಗಿ ಬೋಯಿಂಗ್ ಕಂಪನಿ ₹1,600 ಕೋಟಿ ಬಂಡವಾಳ ಹೂಡಿದೆ.- ಅಮೆರಿಕ ಬಿಟ್ಟರೆ ಬೋಯಿಂಗ್‌ನ ಎರಡನೇ ಅತಿ ದೊಡ್ಡ ಕೇಂದ್ರ ಇದಾಗಿದೆ. - ಈ ಕೇಂದ್ರದ ಮೂಲಕ ಬೋಯಿಂಗ್ ವರ್ಷಕ್ಕೆ ₹10,000 ಕೋಟಿ ವಹಿವಾಟನ ಗುರಿ ಹೊಂದಿದೆ.* ಈ ಸಂದರ್ಭದಲ್ಲಿ ಮಾತನಾಡಿದ ಬೋಯಿಂಗ್ ಕಂಪನಿಯ ಸಿಒಒ ಸ್ಪೆಫೇನ್ ಪೋಪ್, 'ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯ ಮೇರೆಗೆ ಬೋಯಿಂಗ್ ಸುಕನ್ಯಾ ಕಾರ್ಯಕ್ರಮವನ್ನೂ ಆರಂಭಿಸಿದ್ದೇವೆ. ಮಹಿಳೆಯರಿಗೆ ಪೈಲಟ್ ಸೇರಿ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ರೀತಿಯ ತರಬೇತಿ ಗಳನ್ನೂ ನೀಡುತ್ತೇವೆ' ಎಂದರು.* 'ದೇಶದ 150 ಶಾಲೆಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತದ ಪ್ರಯೋಗಾಲಯಗಳನ್ನು (ಎಸ್‌ಇಎಂ) ಆರಂಭಿಸಲಿದ್ದೇವೆ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ವೈಮಾನಿಕ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ' ಎಂದು ಸ್ಪೆಫೇನ್ ಪೋಪ್ ಹೇಳಿದರು.* ಕರ್ನಾಟಕ ರಾಜ್ಯವು ದೇಶದ ವೈಮಾನಿಕ ವಲಯದಲ್ಲಿ ಪ್ರಾಬಲ್ಯ ಸಾಧಿಸಿದ್ದು, ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ರಪ್ಟಿನಲ್ಲಿ ಶೇ 65ರಷ್ಟು ಪಾಲನ್ನು ಹೊಂದಿದೆ. ಬೋಯಿಂಗ್‌ನ ಹೊಸ ಉಪಕ್ರಮದಿಂದ ಸ್ಥಳೀಯ ಪ್ರತಿಭಾವಂತರಿಗೆ ಜಾಗತಿಕ ಮಟ್ಟದ ಯೋಜನೆಗಳಲ್ಲಿ ಕಾರ್ಯನಿರ್ವಹಿ ಸಲು ಅವಕಾಶ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.