* ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ವರದಿಯ ಪ್ರಕಾರ ಎಲ್ಲಾ ರೀತಿಯ ಜಾನುವಾರುಗಳ ಹಾಲು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ.* ಹಾಲು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದು, 2021 ರಲ್ಲಿ 209.96 ಮಿಲಿಯನ್ ಟನ್‌ಗಳನ್ನು ಉತ್ಪಾದನೆಯಾಗಿದೆ. ವಿಶ್ವದಲ್ಲಿ ಭಾರತದ ಡೈರಿ ಉತ್ಪನ್ನಗಳ ಪಾಲು ಶೇಕಡಾ 21 ರಷ್ಟಿದೆ. 2020-21ರಲ್ಲಿ ತಲಾ ಬಳಕೆ ದಿನಕ್ಕೆ 427 ಗ್ರಾಂ ಹಾಲು ಬಳಕೆಯಾಗುತ್ತದೆ. ಜಗತ್ತಿನಲ್ಲಿ ಹಾಲಿನ ಸರಾಸರಿ ಬಳಕೆಯು ಪ್ರಸ್ತುತ ಪ್ರತಿ ವ್ಯಕ್ತಿಗೆ 459 ಗ್ರಾಂ ಇದೆ.* ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯನ್ನು ಡಿಸೆಂಬರ್ 2014 ರಲ್ಲಿ ಪ್ರಾರಂಭಿಸಲಾಯಿತು. ಇದರ ಉದ್ದೇಶವು ಸ್ಥಳೀಯ ಜಾನುವಾರು ತಳಿಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದು ಮತ್ತು ಸಂರಕ್ಷಿಸುವುದು. ಹಾಗೂ ವಿಶ್ವದ ಒಟ್ಟು ಹಾಲು ಉತ್ಪಾದನೆಯಲ್ಲಿ ಭಾರತವು ಶೇಕಡಾ 24 ರಷ್ಟು ಕೊಡುಗೆ ನೀಡುತ್ತಿದೆ.* ಪ್ರಸ್ತುತ ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ವಿಶ್ವದ ಸರಾಸರಿ ಹಾಲಿಗಿಂತ 65 ಗ್ರಾಂ ಹೆಚ್ಚು ಹಾಲನ್ನು ಕುಡಿಯಲು ಪ್ರಾರಂಭಿಸಿದ್ದಾರೆ.* ಭಾರತದಲ್ಲಿ ಹಾಲಿನ ಉತ್ಪಾದನೆಯು ಪ್ರತಿ ವರ್ಷ ಶೇಕಡಾ 5.9 ಕ್ಕಿಂತ ಹೆಚ್ಚು ದರದಲ್ಲಿ ಹೆಚ್ಚುತ್ತಿದೆ. ಹಾಗೂ 2013-14ನೇ ಸಾಲಿನಲ್ಲಿ ದೇಶದಲ್ಲಿ 1463 ಲಕ್ಷ ಟನ್ ಹಾಲು ಉತ್ಪಾದನೆಯಾಗಿದೆ. 2022-23ರಲ್ಲಿ 2306.0 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. * ದೇಶದ ಆರ್ಥಿಕತೆಗೆ ಹೈನುಗಾರಿಕೆ ಕ್ಷೇತ್ರವು ಶೇಕಡಾ 5 ರಷ್ಟು ಕೊಡುಗೆ ನೀಡುತ್ತದೆ ಎಂದು ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಅವರು ತಿಳಿಸಿದ್ದಾರೆ.