* ಭೂಮಿಯ ಸುತ್ತ ತನ್ನ ಕಕ್ಷೆಯನ್ನು ಪೂರ್ಣಗೊಳಿಸಿದ 'ಚಂದ್ರಯಾನ 3' ಬಾಹ್ಯಾಕಾಶ ನೌಕೆಯು ಆಗಸ್ಟ್ 1 ರಂದು (ಮಂಗಳವಾರ) ನಸುಕಿನಲ್ಲಿ ಚಂದಿರನ ಕಕ್ಷೆಯತ್ತ ಪಯಣ ಆರಂಭಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.*  ಆಗಸ್ಟ್ 5ರಂದು 'ಚಂದ್ರಯಾನ 3' ನೌಕೆಯನ್ನು ಚಂದ್ರನ ನಿಗದಿತ ಕಕ್ಷೆಗೆ ಸೇರಿಸುವ ಕಾರ್ಯ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.* 'ಚಂದ್ರಯಾನ 3' ನೌಕೆಯನ್ನು ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುವುದಾಗಿ ಇಸ್ರೋ ತಿಳಿಸಿದೆ.