Job Description: * ಭಾರತೀಯ ಮೂಲದ ವಿಜ್ಞಾನಿ ಜೋಯಿತಾ ಗುಪ್ತಾ ಅವರಿಗೆ ಡಚ್ ವಿಜ್ಞಾನದ ಅತ್ಯುನ್ನತ ಪ್ರಶಸ್ತಿಯಾದ ಸ್ಪಿನೋಜಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದನ್ನು 'ಡಚ್ ನೊಬೆಲ್ ಪ್ರಶಸ್ತಿ' ಎಂದು ಸಹ ಕರೆಯಲಾಗುತ್ತದೆ. ಪ್ರೊ|| ಜೋಯಿತಾ ಗುಪ್ತಾ ಅವರ 'ನ್ಯಾಯ ಮತ್ತು ಸುಸ್ಥಿರ ಪ್ರಪಂಚ'ವನ್ನು ಕೇಂದ್ರೀಕರಿಸಿದ ವೈಜ್ಞಾನಿಕ ಕೆಲಸಕ್ಕಾಗಿ ಡಚ್ ವಿಜ್ಞಾನದಲ್ಲಿ ಅತ್ಯುನ್ನತ ಪ್ರಶಸ್ತಿಯನ್ನು ಕೊಡಲಾಗಿದೆ. * 2013 ರಿಂದ ಆಮ್‌ಸ್ಟರ್‌ಡ್ಯಾಮ್ ವಿಶ್ವವಿದ್ಯಾಲಯದಲ್ಲಿ ಜಾಗತಿಕ ದಕ್ಷಿಣದಲ್ಲಿ ಪರಿಸರ ಮತ್ತು ಅಭಿವೃದ್ಧಿಯ ಪ್ರಾಧ್ಯಾಪಕರಾದ ಗುಪ್ತಾ ಅವರನ್ನು ಡಚ್ ರಿಸರ್ಚ್ ಕೌನ್ಸಿಲ್ (NWO) ಆಯ್ಕೆ ಸಮಿತಿಯು ಅವರ 'ವಿಸ್ಮಯಕಾರಿಯಾಗಿ ವಿಶಾಲ ಮತ್ತು ಅಂತರಶಿಸ್ತೀಯ' ಸಂಶೋಧನೆಗಾಗಿ ಆಯ್ಕೆ ಮಾಡಿದೆ.