* ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿ ' ಅಗ್ನಿ ಪ್ರೈಮ್' ಅನ್ನು ಒಡಿಶಾ ಕರಾವಳಿಯ ಡಾ.ಎ.ಪಿ,ಜೆ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿಯಾಗಿ ಹಾರಾಟ ನಡೆಸಲಾಯಿತು ಎಂದು DRDO ಅಧಿಕಾರಿಗಳು ತಿಳಿಸಿದ್ದಾರೆ.  * ಇದರಲ್ಲಿ ಎರಡು ರಿಡಂಡಂಟ್ ನ್ಯಾವಿಗೇಷನ್ ಹಾಗೂ ಗೈಡೆನ್ಸ್ ವ್ಯವಸ್ಥೆಗಳಿದ್ದು, ಈ ಕ್ಷಿಪಣಿಯನ್ನು ರೈಲಿನಿಂದಲೂ, ರಸ್ತೆಯಿಂದಲೂ ಉಡಾಯಿಸಲು ಸಾಧ್ಯವಿದೆ.* ಅಗ್ನಿ ಪ್ರೈಮ್ ಮೂರನೆಯ ಬಾರಿಗೆ ಯಶಸ್ವಿಯಾಗಿ ಪರೀಕ್ಷಿಸಲ್ಪಡುವ ಮೂಲಕ, ಅದರ ಕರಾರುವಾಕ್ಕುತನ ಮತ್ತು ಸಾಮರ್ಥ್ಯಗಳು ಸಾಬೀತಾಗಿವೆ.* ಈ ನೂತನ ಬ್ಯಾಲಿಸ್ಟಿಕ್ ಕ್ಷಿಪಣಿ 1,000 ಕಿಲೋಮೀಟರ್‌ನಿಂದ 2,000 ಕಿಲೋಮೀಟರ್‌ಗಳ ವ್ಯಾಪ್ತಿ ಹೊಂದಿದೆ. ಇದು ಅಗ್ನಿ 3 ಕ್ಷಿಪಣಿಯ ಅರ್ಧ ತೂಕವಷ್ಟೇ ಇದೆ. ಇದರಲ್ಲಿ ನೂತನ ಮಾದರಿಯ ಪ್ರೊಪಲ್ಷನ್ ಹಾಗೂ ಗೈಡೆನ್ಸ್ ವ್ಯವಸ್ಥೆಗಳಿವೆ.