* ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ ದೂರಸಂಪರ್ಕ ಜಾಲ (ಟೆಲಿಕಾಂ ಸಂಪರ್ಕ) ಕಲ್ಪಿಸಲಾಗಿದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪಿತಿ ಜಿಲ್ಲೆಯ ಈ ಹಳ್ಳಿಗಳು ಸಮುದ್ರ ಮಟ್ಟದಿಂದ ಸುಮಾರು 14,931 ಅಡಿ ಎತ್ತರದಲ್ಲಿವೆ. ಟೆಲಿಕಾಂ ಸಂಪರ್ಕ ಸಿಕ್ಕಿರುವ ಸಂಗತಿಯನ್ನು ಕೇಂದ್ರ ದೂರಸಂಪರ್ಕ ಇಲಾಖೆ 'ಎಕ್ಸ್' ಪೋಸ್ಟ್‌ನಲ್ಲಿ ತಿಳಿಸಿದೆ.* ಕೌರಿಕ್ ಹಳ್ಳಿಯು ಟಿಬೆಟ್ ಗಡಿ ಸಮೀಪ ಪ್ರೀತಿ ನದಿಯ ಉಪನದಿ ಪರ ಚು ನದಿಯ ಕಣಿವೆಯಲ್ಲಿ ಇದೆ ಗುಯೆಯು ಪ್ರೀತಿ ನದಿ ಕಣಿವೆಯ ಹಳ್ಳಿಯಾಗಿದೆ. ಚೀನಾದ ಗಡಿಯಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಗುಯೆಯು ಇದೆ. * ವರದಿಗಳ ಪ್ರಕಾರ 1975ರಲ್ಲಿ ಪ್ರೀತಿಯಲ್ಲಿ ಭೂಕಂಪ ಸಂಭವಿಸಿತ್ತು. ಆಗ ಸಂಘಾ ತೆನ್‌ಜಿನ್ ಹೆಸರಿನ ಬೌದ್ಧ ಭಿಕ್ಷುವೊಬ್ಬರ ಸಂರಕ್ಷಿತ ದೇಹ ಪತ್ತೆಯಾಗಿತ್ತು. ಆಗ ಜನರಿಗೆ ಇಂಥದ್ದೊಂದು ಗ್ರಾಮ ಅಸ್ತಿತ್ವದಲ್ಲಿತ್ತು ಎಂಬುದು ಗೊತ್ತಾಗಿತ್ತು. ಸುಮಾರು 25 ವರ್ಷ ಸ್ಥಳೀಯರು ಮತ್ತು ಐಟಿಬಿಪಿ ಅರೆಸೇನಾ ಪೊಲೀಸ್ ಪಡೆ ಈ ಗ್ರಾಮದ ಬಗ್ಗೆ ರಹಸ್ಯ ಪಾಲನೆ ಮಾಡಿದ್ದರು. 2000ರ ಇಸವಿ ಬಳಿಕ ಗುಯೇ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳಗಳಲ್ಲೊಂದೆನಿಸಿದೆ.* ಕೌರಿಕ್ ಗ್ರಾಮ 25 ವರ್ಷದ ಹಿಂದೆ ಭೂಕಂಪ ಮತ್ತು ಪ್ರವಾಹದ ಕಾರಣ ನಿರ್ಜನ ಪ್ರದೇಶವಾಗಿ ಹೋಗಿತ್ತು. ಎಲ್ಲಾ ಜನರು ಬೇರೆಡೆಗೆ ವಲಸೆ ಹೋಗಿದ್ದರು. ಇವತ್ತು ಹಿಂದಿನ ಹಳ್ಳಿಯನ್ನು ನೆನಪಿಸುವ ಹಾಳಾದ ಮನೆ, ರಸ್ತೆ ಇತ್ಯಾದಿ ಕುರುಹುಗಳನ್ನು ಮಾತ್ರ ಕಾಣಬಹುದು. ಈ ಪ್ರದೇಶವೂ ಕೂಡ ಇಂಡೋ ಟೆಬೇಟಿಯನ್ ಬಾರ್ಡರ್ ಪೊಲೀಸ್ ಪಡೆಗಳ ಸುಪರ್ದಿಯಲ್ಲಿದೆ.